masthmagaa.com:

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸಜ್ಜದ್ ಅಫ್ಘನಿ ಎಂಬಾತನನ್ನ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಅಂದ್ಹಾಗೆ ಉಗ್ರರು ಅಡಗಿ ಕೂತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ಶೋಪಿಯಾನ್​ ಜಿಲ್ಲೆಯ ರಾವಲ್​ಪೋರಾದಲ್ಲಿ ಭದ್ರತಾ ಪಡೆಗಳು ಶೋಧಕಾರ್ಯ ಆರಂಭಿಸಿದ್ದವು.  ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಎನ್​ಕೌಂಟರ್​ನಲ್ಲಿ ಸಜ್ಜದ್​ ಅಫ್ಘನಿ ಹತನಾಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ಈತ ಹೊಸ ಹೊಸ ಯುವಕರನ್ನ ಉಗ್ರ ಸಂಘಟನೆಗೆ ಸೇರಿಸುತ್ತಿದ್ದ ಅನ್ನೋದು ಗೊತ್ತಾಗಿದೆ. ಇದೀಗ ಅವನೇ ಫಿನಿಶ್ ಆಗಿರೋದ್ರಿಂದ ಭದ್ರತಾ ಪಡೆಗಳಿಗೆ ದೊಡ್ಡ ಸಕ್ಸಸ್​ ಸಿಕ್ಕಂತಾಗಿದೆ.

-masthmagaa.com

Contact Us for Advertisement

Leave a Reply