ಭಾರತದ ಹಿಜಬ್ ಬೆಂಕಿಗೆ ತುಪ್ಪ ಬೇಕ ತುಪ್ಪ ಎಂದ ಪಾಕಿಸ್ತಾನ್!

masthmagaa.com:

ಕರ್ನಾಟಕದಲ್ಲಿ ನಡೀತಿರೋ ಹಿಜಬ್​ ವಿವಾದಕ್ಕೆ ಪಾಕಿಸ್ತಾನ ಉರಿದುಬಿದ್ದಿದೆ. ಈ ಬಗ್ಗೆ ಟ್ವೀಟ್​ ಮಾಡಿರೋ ಪಾಕ್‌ ವಿದೇಶಾಂಗ ಸಚಿವ ಶಾ ಮಹಮ್ಮದ್‌ ಖುರೇಷಿ ಟ್ವೀಟ್‌ ಮಾಡಿ, ಮುಸ್ಲಿಂ ಹೆಣ್ಣುಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿಸೋದು ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆ. ಯಾರಿಗಾದರೂ ಈ ಮೂಲಭೂತ ಹಕ್ಕನ್ನ ನಿರಾಕರಿಸುವುದು ಮತ್ತು ಹಿಜಬ್ ಧರಿಸಿದ್ದಕ್ಕಾಗಿ ಅವರನ್ನ ಟೆರರೈಸ್​ ಮಾಡೋದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಮುಸ್ಲಿಂರನ್ನ ಒಂದು ಪ್ರದೇಶಕ್ಕೆ ಸೀಮಿತಗೊಳಿಸುತ್ತಿರುವ ಭಾರತದ ಪ್ಲಾನ್​ ಒಂದು ಭಾಗ ಇದು ಅನ್ನೋದನ್ನ ಜಗತ್ತು ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ.
ಪಾಕಿಸ್ತಾನದ ಮತ್ತೊಬ್ಬ ಸಚಿವ ಫವಾದ್ ಹುಸೇನ್​ ಟ್ವೀಟ್​ ಮಾಡಿ, ಮೋದಿಯ ಇಂಡಿಯಾದಲ್ಲಿ ನಡೀತಿರೋದು ಭಯಾನಕವಾಗಿದೆ. ಅಸ್ಥಿರ ನಾಯಕತ್ವದಲ್ಲಿ ಭಾರತೀಯ ಸಮಾಜ ತುಂಬಾ ವೇಗದಲ್ಲಿ ಅವನತಿ ಹೊಂದುತ್ತಿದೆ. ಬೇರೆಯವರು ಬೇರೆ ಬೇರೆ ಡ್ರೆಸ್​ ಧರಿಸುವಂತೆ ಹಿಜಬ್ ಧರಿಸೋದು ಕೂಡ ವೈಯಕ್ತಿಕ ಆಯ್ಕೆ ಎಂದಿದ್ದಾರೆ.
ಹಿಜಾಬ್‌ ಧರಿಸಿದ ಕಾರಣಕ್ಕೆ ಹೆಣ್ಣು ಮಕ್ಕಳಿಗೆ ಶಾಲೆ ಪ್ರವೇಶ ನಿರ್ಬಂಧಿಸಿರುವುದು ಅತ್ಯಂತ ಭೀಕರ ಅಂತ ನೊಬೆಲ್‌ ಪುರಸ್ಕೃತೆ, ಪಾಕಿಸ್ತಾನದ ಹೋರಾಟಗಾರ್ತಿ ಮಲಾಲಾ ಯೂಸುಫ್‌ ಝೈ ಹೇಳಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಮಲಾಲಾ, ಶಿಕ್ಷಣ ಮತ್ತು ಹಿಜಬ್ ನಡುವೆ ಒಂದನ್ನ ಆಯ್ಕೆ ಮಾಡಲು ಕಾಲೇಜು ಫೋರ್ಸ್ ಮಾಡ್ತಿದೆ. ಹಿಜಬ್‌ ಧರಿಸಿರುವ ಹೆಣ್ಣುಮಕ್ಕಳನ್ನ ಶಾಲೆಗೆ ಹೋಗಲು ಬಿಡದೇ ಇರೋದು ಅತ್ಯಂತ ಭೀಕರ. ಕಮ್ಮಿ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಮಹಿಳೆಯರನ್ನ ಟೀಕಿಸುವ ಸಂಪ್ರದಾಯ ಮುಂದುವರೆದಿದೆ. ಮುಸ್ಲಿಂ ಮಹಿಳೆಯರನ್ನ ಕಡೆಗಣಿಸೋದನ್ನ ಭಾರತದ ನಾಯಕರು ನಿಲ್ಲಿಸಬೇಕು ಅಂತ ಆಗ್ರಹಿಸಿದ್ದಾರೆ. ಪಾಕಿಸ್ತಾನ ಮತ್ತು ಮಲಾಲಾ ಹೇಳಿಕೆಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನ ಸಮರ್ಥಿಸಿದ್ರೆ, ಇನ್ನೂ ಕೆಲವರು ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ನಡೀತಿರೋ ದೌರ್ಜನ್ಯ, ಅವರ ಹಕ್ಕುಗಳು ಉಲ್ಲಂಘನೆ ಬಗ್ಗೆ ನೀವೇಕೆ ಮಾತನಾಡುತ್ತಿಲ್ಲ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply