ಕೊರೋನಾದಿಂದಾಗಿ ಮಲೇರಿಯಾಗೆ ಬಲಿಯಾದವರ ಸಂಖ್ಯೆಯಲ್ಲಿ ಭಾರಿ ಏರಿಕೆ!

masthmagaa.com:
2020ರಲ್ಲಿ ಕೊರೋನಾ ಬಂದಿದ್ರಿಂದ ವೈದ್ಯಕೀಯ ಲೋಕದಲ್ಲಿ ಉಂಟಾದ ಅವ್ಯವಸ್ಥೆ ಮಲೇರಿಯಾ ಅಟ್ಟಹಾಸಕ್ಕೆ ಸಹಾಯ ಮಾಡ್ತು ಅಂತ ಅಂಕಿ ಅಂಶಗಳಿಂದ ಗೊತ್ತಾಗಿದೆ. ಯಾಕಂದ್ರೆ ಮಲೇರಿಯಾಗೆ ಬಲಿಯಾದವರ ಸಂಖ್ಯೆಯಲ್ಲಿ 69 ಸಾವಿರ ಏರಿಕೆ ಕಂಡು ಬಂದಿದೆ. ಅಂದ್ರೆ 2019ರಲ್ಲಿ ಮಲೇರಿಯಾಗೆ 5.58 ಲಕ್ಷ ಮಂದಿ ಪ್ರಾಣ ಬಿಟ್ರೆ, 2020ರಲ್ಲಿ 6.27 ಲಕ್ಷ ಜನ ಪ್ರಾಣ ಬಿಟ್ಟಿದ್ದಾರೆ. 2019ಕ್ಕೆ ಹೋಲಿಸಿದ್ರೆ 2020ರಲ್ಲಿ ಮಲೇರಿಯಾಗೆ ಬಲಿಯಾದವರ ಸಂಖ್ಯೆಯಲ್ಲಿ 69 ಸಾವಿರ ಜಾಸ್ತಿಯಾಗಿದೆ. ಆಫ್ರಿಕಾದ ವಿವಿಧ ದೇಶಗಳಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಯಿಲೆಗೆ ಬಲಿಯಾಗಿದ್ದಾರೆ. ಹೆಚ್ಚುವರಿ ಮಲೇರಿಯಾ ಸಾವುಗಳ ಪೈಕಿ 3ನೇ 2ರಷ್ಟು ಕೊರೋನಾದಿಂದಾದ ಅವ್ಯವಸ್ಥೆಯಿಂದಲೇ ಆಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
-masthmagaa.com:

Contact Us for Advertisement

Leave a Reply