ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ಮಾಲ್ಡೀವ್ಸ್​​ ವಿದೇಶಾಂಗ ಸಚಿವ ಅಬ್ದುಲ್ಲಾ ಅಧ್ಯಕ್ಷ!

masthmagaa.com:

ಮಾಲ್ಡೀವ್ಸ್​ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್​ ಅವರನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆಯ 76ನೇ ಅಧಿವೇಶನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. 193 ಸದಸ್ಯರ ಪೈಕಿ 143 ಮತಗಳು ಶಾಹಿದ್ ಪರವಾಗಿ ಬಿದ್ದಿದೆ. ಅಫ್ಘಾನಿಸ್ತಾನದ ಮಾಜಿ ವಿದೇಶಾಂಗ ಸಚಿವ ಡಾ.ಝಾಲ್ಮೈ ರಸ್ಸೌಲ್​ಗೆ ಬರೀ 48 ಮತ ಸಿಕ್ಕಿವೆ. ಸಾಮಾನ್ಯ ಸಭೆಯ 75ನೇ ಅಧಿವೇಶನಕ್ಕೆ ಟರ್ಕಿಯ ವೊಲ್ಕನ್ ಬೊಜ್ಕಿರ್ ಅಧ್ಯಕ್ಷರಾಗಿದ್ರು. ಅಂದಹಾಗೆ ಪ್ರತಿ ವರ್ಷಕ್ಕೊಮ್ಮೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರನ್ನು ಸೀಕ್ರೆಟ್ ಬ್ಯಾಲೆಟ್ ಮೂಲಕ ಆಯ್ಕೆ ಮಾಡಲಾಗುತ್ತೆ. ಅಧ್ಯಕ್ಷಗಿರಿ ಸಿಗೋಕೆ ಸಾಮಾನ್ಯ ಬಹುಮತ ಸಿಕ್ರೆ ಸಾಕಾಗುತ್ತೆ.

-masthmagaa.com

Contact Us for Advertisement

Leave a Reply