ಮಾಲ್ಡೀವ್ಸ್‌ ವಿದೇಶಾಂಗ ಸಚಿವರನ್ನ ಟ್ರೋಲ್‌ ಮಾಡಿದ ಭಾರತೀಯರು!

masthmagaa.com:

ಭಾರತ-ಮಾಲ್ಡೀವ್ಸ್‌ ಬಿಕ್ಕಟ್ಟಿನ ನಂತ್ರ ಇದೀಗ ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಮೂಸಾ ಜ಼ಮೀರ್‌ ಭಾರತಕ್ಕೆ ಬಂದಿಳಿದಿದ್ದಾರೆ. ಆದ್ರೆ ಭಾರತ ಕಡೆ ಬಂದಿರೋ ಮೂಸಾ ಜ಼ಮೀರ್‌ಗೆ ಭಾರತೀಯರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ಟ್ರೋಲ್‌ ಮಾಡಿದ್ದಾರೆ. ಅಂದ್ಹಾಗೆ ಮೂಸಾ ಜ಼ಮೀರ್‌ ಭಾರತಕ್ಕೆ ಭೇಟಿ ನೀಡೋ ಮುಂಚೆ ಸೋಶಿಯಲ್‌ ಮೀಡಿಯಾದಲ್ಲಿ, ʻಭಾರತದ ವಿದೇಶಾಂಗ ಸಚಿವರಾದ ಎಸ್‌ ಜೈಶಂಕರ್‌ನ್ನ ಮೀಟ್‌ ಮಾಡೋಕೆ ಬಹಳ ಉತ್ಸುಕನಾಗಿದ್ದೇನೆ. ಪರಸ್ಪರ ಹಿತ…ಬೆನಿಫಿಟ್‌ಗಾಗಿ ಉಭಯ ದೇಶಗಳ ನಡುವಿನ ಸಹಕಾರ ಹೆಚ್ಚಿಸುವಲ್ಲಿ ಮಾತುಕತೆ ನಡೆಸ್ತೇನೆʼ ಅಂತ ಪೋಸ್ಟ್‌ ಮಾಡಿದ್ದಾರೆ. ಆದ್ರೆ ಈ ಪೋಸ್ಟ್‌ಗೆ, ಭಾರತೀಯರು ಮಾತ್ರ ಕಾಮೆಂಟ್‌ ಮೇಲೆ ಕಾಮೆಂಟ್‌ ಮಾಡಿ ಮೂಸಾರನ್ನ ಹಿಡ್ಕೊಂಡ್‌ ರುಬ್ಬಿದ್ದಾರೆ. ಒಬ್ಬ ಯುಸರ್‌, ʻಏನು… ಪರಸ್ಪರ ಹಿತಕ್ಕಾ?” ಅಂತ ಪ್ರಶ್ನಿಸಿದ್ದಾರೆ. ಮತ್ತೊಬ್ರು, ʻಒಂದು ಕರೆಕ್ಷನ್‌ ಸರ್‌: ಇದು ಮಾಲ್ಡೀವ್ಸ್‌ ಜನರ ಏಕಪಕ್ಷೀಯ ಲಾಭಕ್ಕಾಗಿʼ ಅಂತೇಳಿದ್ದಾರೆ. ಇನ್ನೊಬ್ಬ ಯುಸರ್‌, ʻನಿಮ್ಮ ಕ್ಷಮಾಪಣೆ ಎಲ್ಲಿದೆ? ಅಂತ ಕೇಳಿದ್ದಾರೆ. ಹೀಗೆ ಸಾಲು ಸಾಲಾಗಿ ಭಾರತೀಯರು ಮೂಸಾ ಜ಼ಮೀರ್‌ನ್ನ ಟ್ರೋಲ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply