ಮಾಲ್ಡೀವ್ಸ್‌ ಟೂರಿಸಂಗೆ ಪೆಟ್ಟು: ಚೀನಾ ಮೊರೆಹೋದ ಮಾಲ್ಡೀವ್ಸ್‌!

masthmagaa.com:

ಹೊಸದರಲ್ಲಿ ಅಗಸ ಎತ್ತಿ ಎತ್ತಿ ಒಗೆದಿದ್ದ ಅನ್ನೋ ಹಾಗೆ ಆರಂಭಿಕ ಉತ್ಸಾಹದಲ್ಲಿ ಮಾಲ್ಡೀವ್ಸ್‌ ಸಚಿವರು ಮಾಡಿದ ಟ್ವೀಟ್‌ಗಳು ಈಗ, ಆ ಇಡೀ ದೇಶಕ್ಕೆ ದೊಡ್ಡ ಕಂಟಕ ಆಗ್ತಿವೆ. ತನ್ನ ಸಚಿವರ ಉದ್ಧಟತನಕ್ಕೆ ಮಾಲ್ಡೀವ್ಸ್‌, ಭಾರೀ ಪೆಟ್ಟು ತಿಂತಿದೆ. ಮಾಲ್ಡೀವ್ಸ್‌ಗೆ ಊಟ ಹಾಕ್ತಿದ್ದ ಟೂರಿಸಂಗೆ ಈಗ ಕುತ್ತು ಬಂದಿದೆ. ಇದೀಗ ಮಾಲ್ಡೀವ್ಸ್‌ ಹಾಲಿಡೇ ಪ್ಯಾಕೇಜ್‌ಗಳ ರೇಟ್‌ ಒಮ್ಮೆಲೆ ಕುಸಿದು ಬಿದ್ದಿದೆ. ಹೀಗಂತ ಟ್ರಾವೆಲ್‌ ಏಜೆಂಟ್ಸ್‌ ಹೇಳ್ತಿದ್ದಾರೆ. ಭಾರತ-ಮಾಲ್ಡೀವ್ಸ್‌ ವಿವಾದಕ್ಕೂ ಮೊದ್ಲು, ಅಲ್ಲಿನ ಮೂರು ದಿನಗಳ ಹಾಲಿಡೇ ಪ್ಯಾಕೇಜ್‌ಗೆ 55,000-70,000 ಹತತ್ರ ಇತ್ತು. ಆದ್ರೆ ಇದೀಗ ವಿವಾದದ ನಂತ್ರ ಅದೇ ಸೇಮ್‌ ಪ್ಯಾಕೇಜ್‌ನ ರೇಟ್‌ 45,000ಕ್ಕೂ ಕಡಿಮೆ ಆಗ್ಬಿಟ್ಟಿದೆ. ಇನ್ನು ಬೇರೆ ಪ್ಯಾಕೇಜ್‌ಗಳ ರೇಟ್ಸ್‌ ಗಮನಿಸೋದಾದ್ರೆ, ಈ ಹಿಂದೆ ಪ್ರೀಮಿಯಂ ಫೈವ್‌-ಸ್ಟಾರ್‌ ಪ್ಯಾಕೇಜ್‌ಗಳು 2.5 ಲಕ್ಷ ರೂಪಾಯಿಗೆ ಮಾರಾಟವಾಗ್ತಿದ್ವು. ಆದ್ರೆ ಈಗ 2 ಲಕ್ಷಕ್ಕಿಂತ ಕಡಿಮೆ ಆಗಿದೆ. ಇನ್ನು ಈ ಪ್ಯಾಕೇಜ್‌ಗಳ ಬೆಲೆ ಇನ್ನಷ್ಟು ಕುಸಿಯೋ ಚಾನ್ಸ್‌ಸ್‌ ಇದೆ ಎನ್ನಲಾಗ್ತಿದೆ. ಅಲ್ದೇ ಹೈದರಾಬಾದ್‌ನಿಂದ ಮಾಲ್ಡೀವ್ಸ್‌ ಹೋಗೋಕೆ ಒನ್‌-ವೇ ಟಿಕೆಟ್‌ನ ಬೆಲೆ ಈ ಹಿಂದೆ 20,000 ಇತ್ತು. ಅದೇ ಟಿಕೆಟ್ಸ್‌ನ ಬೆಲೆ ಇದೀಗ 12,000-15,000 ರೇಂಜ್‌ಗೆ ಬಂದು ನಿಂತಿದೆ. ಕಳೆದ 3 ದಿನಗಳಿಂದ ಮಾಲ್ಡೀವ್ಸ್‌ ಬಗ್ಗೆ ಯಾವ್ದೇ ಎನ್ಕ್ವೆರೀಸ್‌ ಬರ್ತಿಲ್ಲ. ಅತ್ತ ಲಕ್ಷದ್ವೀಪಕ್ಕೆ ಬೇಡಿಕೆ ಜಾಸ್ತಿಯಾಗ್ತಿದೆ ಅಂತ ಟ್ರಾವೆಲ್‌ ಆಪರೇಟರ್‌ಗಳು ಮಾಹಿತಿ ನೀಡಿದ್ದಾರೆ. ಇನ್ನು ಮಾಲ್ಡೀವ್ಸ್‌ಗೆ ಅಡ್ವಾನ್ಸ್ಡ್‌ ಟಿಕೆಟ್‌ ಬುಕ್‌ ಮಾಡಿರೋರು ಮಾತ್ರ ಟಿಕೆಟ್‌ ಕ್ಯಾನ್ಸೆಲ್‌ ಮಾಡ್ತಿಲ್ಲ. ಯಾಕಂದ್ರೆ ಈ ರೀತಿ ಕೊನೆ ಕ್ಷಣದಲ್ಲಿ ಟಿಕೆಟ್‌ ಕ್ಯಾನ್ಸೆಲ್‌ ಮಾಡಿದ್ರೆ, ತುಂಬಾ ಕಡಿಮೆ ಹಣ ರಿಫಂಡ್‌ ಆಗುತ್ತೆ ಅಂತ ಟ್ರಾವೆಲ್‌ ಏಜೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಚೇರ್‌ಮ್ಯಾನ್‌ ತಿಳಿಸಿದ್ದಾರೆ.

ಇನ್ನು ಈ ರೀತಿ ದಿಢೀರ್‌ ಅಂತ ಟೂರಿಸಂಗೆ ಪೆಟ್ಟು ಬಿದ್ದಿದ್ದಕ್ಕೆ ಅಲ್ಲಿನ ಹಲವಾರು ಟೂರಿಸ್ಟ್‌ ಸಂಘಟನೆಗಳು ತಮ್ಮದೇ ಸರ್ಕಾರದ ಮೇಲೆ ಮುಗಿಬಿದ್ದಿವೆ. ಮಾಲ್ಡೀವ್ಸ್‌ ಅಸೋಸಿಯೇಷನ್‌ ಆಫ್‌ ಟೂರಿಸಂ ಇಂಡಸ್ಟ್ರಿ (MATI), ಮಾಲ್ಡೀವ್ಸ್‌ ಅಸೋಸಿಯೇಷನ್‌ ಆಫ್‌ ಯಾಟ್‌ ಏಜೆಂಟ್ಸ್‌ (MAYA), ನ್ಯಾಷನಲ್‌ ಹೋಟೆಲ್ ಮತ್ತು ಗೆಸ್ಟ್‌ಹೌಸ್‌ ಅಸೋಸಿಯೇಷನ್‌ ಆಫ್‌ ಮಾಲ್ಡೀವ್ಸ್‌ (NHGAM) ಮತ್ತು ನ್ಯಾಷನಲ್‌ ಬೋಟಿಂಗ್‌ ಅಸೋಸಿಯೇಷನ್‌ ಆಫ್‌ ಮಾಲ್ಡೀವ್ಸ್‌ (NBAM) ಸಂಘಟನೆಗಳು ಸೇರಿ ಮಾಲ್ಡೀವ್ಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಜೊತೆಗೆ ಭಾರತೀಯರ ವಿರುದ್ಧ ಮಾಡಲಾದ ಅವಹೇಳನಕಾರಿ ಟೀಕೆಗಳನ್ನ ಖಂಡಿಸ್ತಿವೆ. ಭಾರತೀಯರು ನಮ್ಮ ಗೆಳೆಯರು ಅಂತ ಹೇಳಿವೆ.

ಮಾಲ್ಡೀವ್ಸ್‌ ಸಂಘಟನೆಗಳು ಭಾರತೀಯರನ್ನ ಗೆಳೆಯ ಅಂತ ಕರೆದ್ರೆ, ಮಾಲ್ಡೀವ್ಸ್‌ ಸರ್ಕಾರ ಮಾತ್ರ ಚೀನಾವನ್ನ ಕುಚಿಕು ಅಂತ ಕರೀತಿದೆ. ಹೌದು ಭಾರತದ ಮ್ಯಾಟರ್‌ಗೆ ಬಂದು ಕೈಸುಟ್ಕೊಂಡ ಮಾಲ್ಡೀವ್ಸ್‌ ಸರ್ಕಾರ ಇದೀಗ ಚೀನಾ ಮುಂದೆ ಕೈಚಾಚ್ಕೊಂಡ್‌ ನಿಂತ್ಬಿಟ್ಟಿದೆ. ಚೀನಾ ಭೇಟಿಯಲ್ಲಿರೋ ಅಧ್ಯಕ್ಷ ಮೊಹಮದ್‌ ಮುಯಿಝು, ʻಹೆಚ್ಚೆಚ್ಚು ಟೂರಿಸ್ಟ್‌ಗಳನ್ನ ನಮ್ಮ ದೇಶಕ್ಕೆ ಕಳಿಸ್ಕೊಡಿ. ನಮ್ಮ ಟೂರಿಸಂ ಉದ್ದಾರಕ್ಕೆ ಸಹಾಯ ಮಾಡಿʼ ಅಂತ ಚೀನಾ ಬಳಿ ಕೇಳ್ಕೊಂಡಿದ್ದಾರೆ. ಜೊತೆಗ ಚೀನಾ ನಮಗೆ ಬಹಳ ಕ್ಲೋಸ್‌ ಆಗಿರೋ ಮಿತ್ರ ರಾಷ್ಟ್ರ ಮತ್ತು ಡೆವೆಲಪ್ಮೆಂಟ್‌ ಪಾರ್ಟನರ್‌. ಕೋವಿಡ್‌ಗೂ ಮುಂಚೆ ಚೀನಾ ನಮ್ಮ ನಂ.1 ಮಾರ್ಕೆಟ್‌ ಆಗಿತ್ತು. ಚೀನಾ ಮತ್ತೆ ತನ್ನ ಸ್ಥಾವವನ್ನ ತಗೋಬೇಕು ಅಂತ ಹೇಳಿದ್ದಾರೆ.

ಇನ್ನು ಭಾರತ-ಮಾಲ್ಡೀವ್ಸ್‌ ವಿವಾದದ ನಡುವೆ ಇದೀಗ ಅಧ್ಯಕ್ಷ ಮೊಹಮದ್‌ ಮುಯಿಝು ಭಾರತಕ್ಕೆ ಭೇಟಿ ನೀಡೋ ವಿಚಾರ ಮುನ್ನೆಲೆಗೆ ಬರ್ತಿದೆ. ಮೊಹಮದ್‌ ಮುಯಿಝು ಅವ್ರು ಡಿಸೆಂಬರ್‌ 2023ರಲ್ಲಿ ಭಾರತ ಭೇಟಿಗೆ ಪ್ರೊಪೋಸಲ್‌ ಕಳಿಸಿದ್ರು. ಇದನ್ನ ಅವ್ರು ನವೆಂಬರ್‌ನಲ್ಲಿ ತಾವು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡೋ ಮೊದ್ಲೇ ಕಳುಸಿದ್ರು. ಆದ್ರೆ ಈ ಬಗ್ಗೆ ಇದುವರೆಗೆ ಭಾರತದ ಕಡೆಯಿಂದ ಯಾವ್ದೇ ರೀತಿ ಕನ್ಫರ್ಮೇಶನ್‌ ಸಿಕ್ಕಿಲ್ಲ. ಮಾಲ್ಡೀವ್ಸ್‌ ಸರ್ಕಾರ ಈಗಲೂ ಭಾರತ ಡೇಟ್‌ ಕನ್ಫರ್ಮ್‌ ಮಾಡೋದಕ್ಕೆ ಕಾಯ್ತಿದೆ ಅಂತ ವರದಿಯಾಗಿದೆ

ಇವೆಲ್ಲದ್ರ ನಡುವೆ ಮಾಲ್ಡೀವ್ಸ್‌ನ ವಿಪಕ್ಷ ಮಾಲ್ಡೀವಿಯನ್‌ ಡೆಮಾಕ್ರೆಟಿಕ್‌ ಪಾರ್ಟಿಯ ಸಂಸದ ಇದೀಗ ಅಮಾನತ್ತಾಗಿರೋ 3 ಡೆಪ್ಯುಟಿ ಮಿನಿಸ್ಟರ್‌ಗಳನ್ನ ಫೈರ್‌ ಮಾಡ್ಬೇಕು ಅಂತ ಆಗ್ರಹಿಸಿದ್ದಾರೆ. ಜೊತೆಗೆ ನಾವು ಕೇಳುವಂತಹ ಪ್ರಶ್ನೆಗಳಿಗೆ ಅವ್ರು ಸದನಕ್ಕೆ ಬಂದು ಉತ್ತರ ನೀಡ್ಬೇಕು. ಹಾಗಾಗಿ ಮಾಲ್ಡೀವ್ಸ್‌ ವಿದೇಶಾಂಗ ಸಚಿವರಿಗೆ ಸಮನ್ಸ್‌ ನೀಡಿ ಅಂತ ಪಾರ್ಲಿಮೆಂಟ್‌ ಸ್ಪೀಕರ್‌ಗೆ ಸಂಸದ ಮೀಕೇಲ್‌ ಅಹಮದ್‌ ನಸೀಮ್‌ (Meekail Ahmed Naseem) ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply