ಪುರುಷ ಪ್ರಧಾನ ಮನೋಭಾವ ಈಗ ಇಲ್ಲವಾಗಿದೆ : ರವೀನಾ ಟಂಡನ್‌

masthmagaa.com:

ಕೆಜಿಎಫ್‌ ಖ್ಯಾತಿಯ ಬಾಲಿವುಡ್‌ ನಟಿ ರವೀನಾ ಟಂಡನ್‌, ಬುಧವಾರ ( ಎಪ್ರಿಲ್‌ 26) ‘ಮನ್ ಕಿ ಬಾತ್ @100 ನಲ್ಲಿ ರಾಷ್ಟ್ರೀಯ ಕಾನ್ಕ್ಲೇವ್‌ನ ಸಮಿತಿಯಲ್ಲಿ   ನಾರಿಶಕ್ತಿಯ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಿರ್ಮಾಪಕರು, ಮತ್ತು ಚಾನೆಲ್ ಮುಖ್ಯಸ್ಥರು ಸೇರಿದಂತೆ ಎಲ್ಲ ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಮುಂದೆ ಬಂದು ಬದಲಾವಣೆ ಮಾಡಿದ್ದಾರೆ ಅಂತ ರವೀನಾ ಟಂಡನ್ ಹೇಳಿದ್ದಾರೆ.

“ಚಲನಚಿತ್ರಗಳಲ್ಲಿ ಕ್ಯಾಮರಾದ ಮುಂದೆ ಮತ್ತು ಹಿಂದೆ ಪುರುಷರೇ ಇರಬೇಕು ಅನ್ನುವಂತ ಮನೋಭಾವವನ್ನ ತೊಡೆದು ಹಾಕಿ ಮಹಿಳೆಯರು ಮುನ್ನುಗ್ತಾ ಇದಾರೆ, ಚಲನಚಿತ್ರೋದ್ಯಮ, ಟಿವಿ ಮಾಧ್ಯಮ ಮತ್ತು OTT ಪ್ಲಾಟ್‌ಫೋರ್ಮ್‌ಗಳನ್ನ ನೋಡಿ ಕಲೀಬೇಕು. ಮಹಿಳೆಯರಿಗೆ ಉತ್ತಮ ವೇತನ ನೀಡುವಲ್ಲಿ ಮತ್ತು ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವಲ್ಲಿಿಇವುಗಳು ಯಶಸ್ವಿಯಾಗಿವೆ. ನಾವು ಈವಾಗ್ಲೂ ಸಹ ವೇತನ ಅಸಮಾನತೆ ಬಗ್ಗೆ ಮಾತಾಡ್ತೀವಿ, ಆದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವಂತಹ ಮಹಿಳೆಯರು ಪುರುಷರಿಗಿಂತ ಜಾಸ್ತಿ ಸಂಬಳ ತಗೋತಾರೆ. ಮಹಿಳೆಯರು ತಾವು ಮಾಡುವ ಕೆಲಸದಿಂದ ಟಿವಿ ಮಾಧ್ಯಮಗಳಲ್ಲಿ ಬಹಳ ಯಶಸ್ವಿಯಾಗಿ ಮುನ್ನುಗ್ತಾ ಇದಾರೆ. ನಮ್ಮ ಸಿನಿಮಾ ಇಂಡಸ್ಟ್ರಿಯೂ ಸಹ ಈಗೀಗ ಮಹಿಳಾ ಪ್ರಧಾನವಾಗ್ತಾ ಇದೆ. ಮೊದಲಿನಿಂದ ಪುರುಷ ಪ್ರಧಾನ ಸಿನಿಮಾಗಳನ್ನ ಮಾಡ್ತಾ ಇದ್ದವರು ಈಗ ಪುರುಷರೇ ಮಾಡಬೇಕು ಅನ್ನುವಂತ ಮನೋಭಾವವನ್ನ ತೊಡೆದು ಹಾಕಿ ಮಹಿಳೆಯರು ಎಂಟ್ರಿ ಕೊಟ್ಟಿದ್ದಾರೆ.ಇವತ್ತಿನ ಜಗತ್ತಿನಲ್ಲಿ ಬದಲಾವಣೆಯಾಗಿದೆ ಯಾಕಂದ್ರೆ, ನಿರ್ದೇಶಕರು, ನೃತ್ಯ ಸಂಯೋಜಕರು , ಛಾಯಾಗ್ರಾಹಕರು, ನಿರ್ಮಾಪಕರು, ಚಾನೆಲ್ ಮುಖ್ಯಸ್ಥರು ಈ ರೀತಿಯ ಎಲ್ಲಾ ಉನ್ನತ ಸ್ಥಾನಗಳಲ್ಲಿ ಮಹಿಳೆಯರೇ ಇದ್ದಾರೆ.” ಅಂತ ರವೀನಾ ಟಂಡನ್‌ ಹೇಳಿದ್ದಾರೆ

-masthmagaa.com

Contact Us for Advertisement

Leave a Reply