ಪಶ್ಚಿಮ ಬಂಗಾಳ ಉಪಚುನಾವಣೆ ಮಮತಾ ಬ್ಯಾನರ್ಜಿ ವಿರುದ್ಧ ಲೇಡಿ ಲಾಯರ್!

masthmagaa.com:

ಇದೀಗ ಬಹು ನಿರೀಕ್ಷಿತ ಭಬಾನಿಪುರ್‌ ಉಪಚುನಾವಣೆಗೆ ಮಮತಾ ಬ್ಯಾನರ್ಜಿ ಅವ್ರ ವಿರುದ್ದ ಪ್ರಿಯಾಂಕ ಟೆಬ್ರೆವಾಲ್‌ ಎಂಬ ಲಾಯರ್‌ಅನ್ನ ಬಿಜೆಪಿ ಕಣಕ್ಕಿಳಿಸಿದೆ. ಮಮತಾ ಬ್ಯಾನರ್ಜಿ ಕೂಡ ಇವತ್ತು ನಾಮ ಪತ್ರ ಸಲ್ಲಿಸಿದ್ದಾರೆ. ಪ್ರಿಯಾಂಕ ಟಿಬ್ರೆವಾಲ್‌ ಮಾಜಿ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಅವರ ಕಾನೂನು ಸಲಹೆಗಾರರಾಗಿದ್ರು. ಇವ್ರು ಕೂಡ ಏಪ್ರೀಲ್‌ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ರು. ಇನ್ನು ಇದೇ ಏಪ್ರೀಲ್‌ ಮೇ ತಿಂಗಳಲ್ಲಿ ನಡೆದ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಬ್ಯಾನರ್ಜಿಯವ್ರು ಸ್ಪರ್ಧಿಸಿದ್ರು. ಇವ್ರ ವಿರುದ್ದ ಬಿಜೆಪಿ ಸುವೇಂದು ಅಧಿಕಾರಿಯನ್ನ ಪ್ರತಿಸ್ಪರ್ಧಿಯಾಗಿ ನಿಲ್ಲಿಸಿತ್ತು. ಮಮತಾ ಬ್ಯಾನರ್ಜಿ ಚುನಾವಣೆಗೆ ನಿಂದ ಒಂದೇ ಒಂದು ಕ್ಷೇತ್ರ ನಂದಿಗ್ರಾಮ. ಇಲ್ಲಿ ಸುವೇಂಧು ಅಧಿಕಾರಿ ವಿನ್‌ ಆದ್ರು ಮಮತಾ ಬ್ಯಾನರ್ಜಿ ಸೋತ್ರು. ಆದ್ರೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್‌ಗೆ ಭರ್ಜರಿ ಜಯ ಸಿಕ್ಕಕಾರಣ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಂದ್ರೆ ಮೂರನೆ ಬಾರಿಗೆ ಮುಖ್ಯಮಂತ್ರಿ ಆಗಿ ಮುಂದುವರೆದ್ರು. ಆದ್ರೆ ಇವ್ರು ವಿಧಾನ ಸಭೆಯ ಮೆಂಬರ್‌ ಆಗಿರಲಿಲ್ಲ. ಯಾರೆ ಮುಖ್ಯಮಂತ್ರಿ ಆದ್ರೂ, ಅಥವ ಸಚಿವರಾದ್ರೂ ಅವ್ರು ವಿಧಾನ ಸಭೆ ಅಥವಾ ವಿಧಾನ ಪರಿಷತ್‌ ಸದಸ್ಯ ಆಗ್ದೇ ಇದ್ದಂತಹ ಸಂದರ್ಭದಲ್ಲಿ, ಮುಂದಿನ 6 ತಿಂಗಳ ಒಳಗಾಗಿ ಅವ್ರು ವಿಧಾನ ಸಭೆಯ ಮೆಂಬರ್‌ ಆಗಲೇಬೇಕಾಗುತ್ತೆ. ಹಾಗಾಗಿ ಈಗ ಭಬಾನಿಪುರ್‌ನಲ್ಲಿ ವಿನ್‌ ಆದ ತೃಣ ಮೂಲ ಕಾಂಗ್ರೇಸ್‌ನ ಅಭ್ಯರ್ಥಿ, ಮಮತಾ ಬ್ಯಾನರ್ಜಿ ಅವ್ರ ಸಲುವಾಗಿ ರಾಜಿನಾಮೆ ಕೊಟ್ಟಿದ್ದಾರೆ. ಈಗ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಿ ಮುಂದುವರೆಬೇಕು ಅಂತ ಆದ್ರೆ ಈ ಭಬಾನಿ ಪುರ್‌ನಲ್ಲಿ ವಿನ್‌ ಆಗ್ಬೇಕು. ಹಾಗಾಗಿ ಇದೊಂತರ ಮಮತಾ ಬ್ಯಾನರ್ಜಿಗೆ ಮಾಡು ಇಲ್ಲವೆ ಮಡಿ ಅನ್ನುವಂತಹ ಯುದ್ದ. ವಿನ್ ಆಗದ್ರೆ ಅಧಿಕಾರದಲ್ಲಿ ಮುಮದುವರಿಯೋಕೇ ಆಗೋದೆ ಇಲ್ಲ ಅಂತ ಅಲ್ಲ. ಅದಕ್ಕೆ ನಾನಾ ಅಡ್ದದಾರಿಗಳಿವೆ. ರಾಜಿನಾಮೆ ಕೊಟ್ಟು ಮತ್ತೊಮ್ಮೆ ರಾಜ್ಯಪಾಲರಿಂದ ಪ್ರಮಾಣವಚನ ಬೋಧಿಸಿಕೊಂಡು ಮತ್ತೆ ಬರಬೇಕು ಅಷ್ಟೆ.

-masthmagaa.com

Contact Us for Advertisement

Leave a Reply