ಪಾಕಿಸ್ತಾನಕ್ಕೆ ಭಾರತೀಯ ಆರ್ಮಿ ಮಾಹಿತಿ ರವಾನೆ? ಪಾಕ್‌ ಗೂಢಚಾರಿ ಬಂಧನ!

masthmagaa.com:

ಪಾಕಿಸ್ತಾನ ಪರ ಬೇಹುಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಶೈಲೇಶ್‌ ಕುಮಾರ್‌ ಸಿಂಗ್‌ ಅನ್ನೋ ವ್ಯಕ್ತಿ ಅರುಣಾಚಲ ಪ್ರದೇಶದಲ್ಲಿ ನಿಯೋಜನೆಯಾಗಿದ್ದ ಭಾರತೀಯ ಸೇನೆಯಲ್ಲಿ ಸುಮಾರು 9 ತಿಂಗಳ ಕಾಲ ತಾತ್ಕಾಲಿಕ ಲೇಬರ್‌ ಆಗಿ ಕೆಲಸ ಮಾಡಿದ್ದ. ಈ ವೇಳೆ ವಾಹನಗಳ ಇರೋ ಜಾಗ ಮತ್ತು ಅವುಗಳ ಓಡಾಟಕ್ಕೆ ಸಂಬಂಧಿಸಿದ ಸೇನೆ ಕುರಿತ ಮಾಹಿತಿಯನ್ನ ISI ಏಜೆಂಟ್‌ಗಳಿಗೆ ಕಳಿಸಿದ್ದಾನೆ ಅಂತ ಆರೋಪಿಸಲಾಗಿದೆ. ಈತ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಹರ್ಲೀನ್‌ ಕೌರ್‌ ಅನ್ನೋ ಪಾಕ್‌ ಏಜೆಂಟ್‌ ಜೊತೆಯಲ್ಲಿ ಮಾತಾಡ್ತಿದ್ದ ಅಂತ ಪೊಲೀಸರು ತಿಳಿಸಿದ್ದಾರೆ. ಅಷ್ಟೆ ಅಲ್ದೆ ಪ್ರೀತಿ ಅನ್ನೋ ಇನ್ನೋರ್ವ ISI ಏಜೆಂಟ್‌ ಜೊತೆ ಕಾಂಟ್ಯಾಕ್ಟ್‌ ಇದ್ದು, ಆಕೆಗೆ ತಾನು ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದೀನಿ ಅಂತ ಪರಿಚಯಿಸಿಕೊಂಡಿದ್ದ. ಜೊತೆಗೆ ಸೇನೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನ ಪ್ರೀತಿ ಬಳಿ ಕೂಡ ಶೇರ್‌ ಮಾಡಿದ್ದ. ಅದಕ್ಕೆ ಬದಲಾಗಿ ಹಣ ಪಡೆದಿದ್ದಾನೆ ಅಂತ ATS ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದ್ರೆ ಶೈಲೇಶ್‌ ಪ್ರಸ್ತುತ ಸೇನೆಯಲ್ಲಿ ಯಾವುದೇ ಕೆಲಸ ಮಾಡ್ತಿಲ್ಲ. ಅಂದ್ಹಾಗೆ ಈ ಹರ್ಲೀನ್‌ ಕೌರ್‌ ಹಾಗೂ ಪ್ರೀತಿ ಅನ್ನೋ ಅಕೌಂಟ್‌ಗಳು ಫೇಕ್‌ ಆಗಿದ್ದು, ಭಾರತೀಯ ಸೇನಾ ಮಾಹಿತಿಯನ್ನ ಪಡೆದು ISI ಗೆ ನೀಡುತ್ತಿದ್ದರು ಅಂತ ATS ಹೇಳಿದೆ.

-masthmagaa.com

Contact Us for Advertisement

Leave a Reply