ಮನುಷ್ಯನಿಗೆ ಹಂದಿ ಹಾರ್ಟ್ ಫಿಕ್ಸ್! ಸದ್ಯ ರೋಗಿ ಜೀವಂತ!

masthmagaa.com:

ವಿಶ್ವದಲ್ಲೇ ಮೊದಲ ಬಾರಿಗೆ ಅಮೆರಿಕದ ಮೇರಿಲ್ಯಾಂಡ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಜೀವ ಉಳಿಸೋ ಕೊನೆಯ ಪ್ರಯತ್ನವಾಗಿ ಹಂದಿಯ ಹೃದಯವನ್ನು ಕಸಿ ಮಾಡಲಾಗಿದೆ. ಜೆನಟಿಕ್ ಬದಲಾವಣೆಗಳನ್ನು ಹೊಂದಿರೋ ಹಂದಿ ಇದಾಗಿದೆ. ಶುಕ್ರವಾರ ಈ ಸರ್ಜರಿ ನಡೆದಿದ್ದು, ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ಈಗ ಸ್ಟೇಟ್ಮೆಂಟ್ ಬಿಡುಗಡೆ ಮಾಡಿದೆ. 57 ವರ್ಷದ ಡೇವಿಡ್ ಬೆನ್ನೆಟ್ ಹೃದಯ ಸಮಸ್ಯೆಯಿಂದ ಬಳಲುತ್ತಿದ್ರು. ಆದ್ರೆ ವೈದ್ಯಕೀಯ ಕಾರಣಗಳಿಂದ ಮನುಷ್ಯರ ಅಂಗಾಂಗ ಕಸಿ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೇ ಅವರಿಗೆ ಹಂದಿಯ ಹೃದಯ ಫಿಕ್ಸ್ ಮಾಡಲಾಗಿದೆ. ಆದ್ರೆ ಅವರು ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಳ್ತಿದ್ದು, ಹಂದಿ ಹೃದಯ ಹೇಗೆ ಕೆಲಸ ಮಾಡ್ತಿದೆ ಅಂತ ಕ್ಲೋಸ್ ಆಗಿ ಮಾನಿಟರ್ ಮಾಡಲಾಗ್ತಿದೆ. ಈ ಹಂದಿ ಹೃದಯ ಕಸಿ ಮಾಡೋ ವಿಷ್ಯ ಡೇವಿಡ್ ಬೆನ್ನೆಟ್​​ಗೂ ಗೊತ್ತಿತ್ತು. ಹೀಗಾಗಿ ಸರ್ಜರಿಗೂ ಮುನ್ನ ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ಸಾಯಬೇಕು ಅಥವಾ ಹಂದಿ ಹೃದಯ ಕಸಿ ಮಾಡಬೇಕು.. ಬೇರೆ ಆಪ್ಶನ್ ಇಲ್ಲ.. ನಾನು ಬದುಕಬೇಕು. ಇದು ಕತ್ತಲಲ್ಲಿ ಬಾಣ ಬಿಟ್ಟಂತೆ ಅಂತ ನನಗೂ ಗೊತ್ತಿದೆ. ಆದರೆ ಇದು ನನಗೆ ಉಳಿದಿರೋ ಕೊನೆಯ ಅವಕಾಶ ಅಂತ ಹೇಳಿದ್ದಾರೆ. ಅಂದಹಾಗೆ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಬಳಲ್ತಿರೋ ಇವರು ಹಲವು ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ. ಈ ಹೃದಯ ಕಸಿಯ ಬಳಿಕ ಬೆಡ್​ ಬಿಟ್ಟು ಬದುಕುವಂತಾಗಲಿದೆ ಅನ್ನೋ ವಿಶ್ವಾಸದಲ್ಲಿ ಅವರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಡೇವಿಡ್ ಬೆನ್ನೆಟ್ ಮಗ, ಈ ಶಸ್ತ್ರ ಚಿಕಿತ್ಸೆ ಖಂಡಿತವಾಗಿಯೂ ಸಕ್ಸಸ್ ಆಗುತ್ತೆ ಅಂತ ಹೇಳಕ್ಕಾಗಲ್ಲ ಅಂತ ನನ್ನ ತಂದೆಗೂ ಗೊತ್ತಿದೆ.ವೈದ್ಯರ ಬಳಿ ಬೇರೆ ದಾರಿ ಇರಲಿಲ್ಲ ಅಂತ ಹೇಳಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ಎಫ್​ಡಿಎ ಕೂಡ ಹೊಸ ವರ್ಷದಂದು ಅನುಮತಿ ನೀಡಿತ್ತು. ಅಂದಹಾಗೆ ಇದು ಯಶಸ್ವಿ ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಆದ್ರೆ ಪ್ರಾಣಿಗಳಿಂದ ಮನುಷ್ಯರಿಗೆ ಅಂಗಾಂಗ ಕಸಿ ಮಾಡುವ ವೈದ್ಯಲೋಕದ ಪ್ರಯತ್ನದಲ್ಲಿ ಒಂದು ಮೈಲಿಗಲ್ಲಾಗಿದೆ ಅಂತ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಈ ಪ್ರಯತ್ನದಲ್ಲಿ ವೈದ್ಯಲೋಕ ಯಶಸ್ವಿಯಾದ್ರೆ ಅಂಗಾಂಗಗಳ ದೊಡ್ಡ ಮಟ್ಟದ ಕೊರತೆ ನೀಗಲಿದೆ. ಅಂದಹಾಗೆ ಬೆನೆಟ್​​ಗೆ ಹೃದಯ ದಾನ ಮಾಡಿದ ಹಂದಿಗೆ 10 ಜೆನೆಟಿಕ್ ಎಡಿಟ್​​​​ಗಳನ್ನು ಮಾಡಲಾಗಿತ್ತು. ಅಂದಹಾಗೆ ಹಂದಿಯ ಕೆಲವೊಂದು ಅಂಗಗಳು ಮನುಷ್ಯರ ಅಂಗಗಳಿಗೆ ಹೋಲಿಕೆಯಾಗುತ್ತೆ. ಅದ್ರಲ್ಲಿ ಹೃದಯ ಕೂಡ ಒಂದು.. ಹಂದಿಗಳ ವಾಲ್ವ್​​​ನ್ನು ಮನುಷ್ಯರಿಗೆ ಹಲವು ವರ್ಷಗಳಿಂದ ಯಶಸ್ವಿಯಾಗಿ ಕಸಿ ಮಾಡ್ಕೊಂಡು ಬರಲಾಗಿದೆ.

ಈ ಹಿಂದೆ ಇದೇ ರೀತಿ ಹಂದಿಯ ಕಿಡ್ನಿಯನ್ನು ಮನುಷ್ಯನ ದೇಹಕ್ಕೆ ಹೊರಗಿನಿಂದ ಕನೆಕ್ಟ್​ ಮಾಡಿ, ಪ್ರಯೋಗ ನಡೆಸಲಾಗಿತ್ತು.

-masthmagaa.com

Contact Us for Advertisement

Leave a Reply