ಹೆಂಡತಿಗೆ ತಾಜ್​​ಮಹಲ್ ರೀತಿಯ ಮನೆ ಗಿಫ್ಟ್ ಕೊಟ್ಟ ಆಧುನಿಕ ಷಹಜಹಾನ್!

masthmagaa.com:

ಮಧ್ಯಪ್ರದೇಶ: ಬುರ್ಹಾನ್​ಪುರದಲ್ಲಿ ಆಧುನಿಕ ಷಹಜಹಾನ್ ಒಬ್ಬರು ಪತ್ತೆಯಾಗಿದ್ದಾರೆ. ತಾಜ್​ಮಹಲ್​​ಗೆ ಹೋಲುವ ಮನೆ ಕಟ್ಟಿಸಿ, ತಮ್ಮ ಪತ್ನಿಗೆ ಗಿಫ್ಟ್ ಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ನಡೆಸೋ ಆನಂದ್ ಪ್ರಕಾರ ಚೌಕ್ಸೀ ತಮ್ಮ ಪತ್ನಿ ಮಂಜುಶಾ ಚೌಕ್ಸೀಗಾಗಿ ಈ ಮನೆ ಕಟ್ಟಿಸಿದ್ದಾರೆ. ಈ ಜೋಡಿ ಆಗ್ರಾಗೆ ಹೋಗಿ ತಾಜ್​ಮಹಲ್ ನೋಡಿಕೊಂಡು ಬಂದು, ಅದ್ರ ವಾಸ್ತುಶಿಲ್ಪದ ಕುರಿತು ಅಧ್ಯಯನ ನಡೆಸಿದ್ರು. ನಂತರ ಎಂಜಿಯರ್​​ಗಳಿಗೆ ಅದ್ರ ಮಾಹಿತಿ ನೀಡಿದ್ರು. ಆಮೇಲೆ ಎಂಜಿನಿಯರ್​​ಗಳು ಕೂಡ ತಾಜ್​ಮಹಲ್​​ಗೆ ಹೋಗಿ, ಮಾಹಿತಿ ಪಡ್ಕೊಂಡು ಈ ಕಟ್ಟಡ ಕಟ್ಟಿದ್ದಾರೆ. ಆರಂಭದಲ್ಲಿ ಈ ರೀತಿ ಪ್ಲಾನ್ ಇರಲಿಲ್ಲ.. 80 ಅಡಿ ಎತ್ತರದ ಮನೆ ನಿರ್ಮಾಣಕ್ಕೆ ಮುಂದಾಗಿದ್ರು. ಆದ್ರೆ ಅದಕ್ಕೆ ಅನುಮತಿ ಸಿಗಲಿಲ್ಲ. ಹೀಗಾಗಿ ತಾಜ್​ಮಹಲ್ ರೀತಿಯ 29 ಅಡಿ ಎತ್ತರದ ಮನೆ ಕಟ್ಟಿಸಿದ್ದಾರೆ. ಇದ್ರ ಎರಡು ಫ್ಲೋರ್​​ಗಳಲ್ಲಿ ಎರಡು ಬೆಡ್​ರೂಂ, ಕಿಚನ್​, ಲೈಬ್ರರಿ, ಮೆಡಿಟೇಷನ್ ರೂಂ ಎಲ್ಲಾ ಇದೆ.

-masthmagaa.com

Contact Us for Advertisement

Leave a Reply