ಮೊಬೈಲ್ ನುಂಗಿದ ಭೂಪ! 6 ತಿಂಗಳ ನಂತರ ಏನಾಯ್ತು ಗೊತ್ತಾ?

masthmagaa.com:

ಈಜಿಪ್ಟ್​​ನಲ್ಲಿ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿದೆ. 6 ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಮೊಬೈಲ್ ನುಂಗಿದ್ದಾರೆ. ಆದ್ರೆ ಈ ವಿಚಾರ ಬೇರೆಯವರಿಗೆ ಹೇಳೋಕೆ ಮುಜುಗರಪಟ್ಟಿದ್ದಾರೆ. ಇದೇ ಕಾರಣಕ್ಕೆ ಆಸ್ಪತ್ರೆಗೂ ಹೋಗಿರಲಿಲ್ಲ. ಅದು ನೈಸರ್ಗಿಕ ರೀತಿಯಲ್ಲೇ ಹೊರಗೆ ಬರಬಹುದು ಅಂತ ಭಾವಿಸಿ ಕಾಯ್ತಾ ಇದ್ರು. ಆದ್ರೆ ಮೊಬೈಲ್ ನುಂಗಿ ಆರು ತಿಂಗಳು ಕಳೆದು ಹೋಗಿದ್ದು, ಇತ್ತೀಚೆಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬೇರೆ ದಾರಿಯಿಲ್ಲದೇ ವ್ಯಕ್ತಿ ಅಸ್ವಾನ್ ಯೂನಿವರ್ಸಿಟಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಸ್ಕ್ಯಾನ್ ಮಾಡಿದ ವೈದ್ಯರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕಂದ್ರೆ ವ್ಯಕ್ತಿಯ ಹೊಟ್ಟೆಯಲ್ಲಿ ಮೊಬೈಲ್ ಇರೋದು ಗೊತ್ತಾಗಿದೆ. ನಂತರ ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ಮೊಬೈಲ್ ಹೊಟ್ಟೆಯಲ್ಲಿ ಇದ್ದಿದ್ದರಿಂದ ತುಂಬಾ ಇನ್ಫೆಕ್ಷನ್ ಆಗಿರೋದು ಪತ್ತೆಯಾಗಿದೆ. ಕೂಡಲೇ ಆಪರೇಷನ್ ಮಾಡಿದ ವೈದ್ಯರು ಮೊಬೈಲ್ ಹೊರತೆಗೆದಿದ್ದಾರೆ. ಆಪರೇಷನ್ ತಡವಾಗಿದ್ರೆ ವ್ಯಕ್ತಿಯ ಜೀವ ಹೋಗೋ ಅಪಾಯ ಇತ್ತು ಅಂತ ಕೂಡ ವೈದ್ಯರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply