ಯುವಕನನ್ನು ಭಯಾನಕ ಸಾವಿನಿಂದ ರಕ್ಷಿಸಿದ ಪೊಲೀಸರು..! ವಿಡಿಯೋ ನೋಡಿ..

ಅಹಮದಾಬಾದ್: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ತಗಲಾಕ್ಕೊಂಡ ಯುವಕನನ್ನು ರೈಲ್ವೆ ರಕ್ಷಣಾ ದಳ ಪೊಲೀಸರು ರಕ್ಷಿಸಿದ್ದಾರೆ. ಅಹಮದಾಬಾದ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆಶ್ರಮ್ ಎಕ್ಸ್‍ಪ್ರೆಸ್ ರೈಲು ಹೊರಡುತ್ತಿರುವಾಗ ಓಡಿಬಂದ ಯುವಕನೊಬ್ಬ ಹತ್ತಲು ಯತ್ನಿಸುತ್ತಾನೆ. ಆಗ ಜಾರಿ ಬೀಳುತ್ತಾನೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಓಡಿಬಂದು ಆತ ರೈಲಿನಡಿ ಜಾರದಂತೆ ತಡೆದು, ರೈಲು ಬೋಗಿಯೊಳಗೆ ತಳ್ಳುತ್ತಾರೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೈಲ್ವೆ ಇಲಾಖೆ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದೆ. ಅಲ್ಲದೆ ನೀವು ಎಷ್ಟೇ ಫಿಟ್, ಸ್ಮಾರ್ಟ್ ಆಗಿದ್ದರೂ ಈ ರೀತಿ ಚಲಿಸುತ್ತಿರುವ ರೈಲಿನಲ್ಲಿ ಹತ್ತುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಕೆ ಕೂಡ ನೀಡಿದೆ.

Contact Us for Advertisement

Leave a Reply