ದೀದಿ ಮನೆಗೆ ನುಗ್ಗಲು ಪ್ರಯತ್ನಿಸಿದ ಬಂದೂಕುದಾರಿ ಬಂಧನ!

masthmagaa.com:

ಅಪರಿಚಿತ ವ್ಯಕ್ತಿಯೊಬ್ಬ ಕಾರ್‌ನಲ್ಲಿ ಶಸ್ತ್ರಾಸ್ತ್ರಗಳನ್ನ ಇಟ್ಕೊಂಡು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವ್ರ ಮನೆಗೆ ಪ್ರವೇಶಿಸೋಕೆ ಟ್ರೈ ಮಾಡಿರುವ ಘಟನೆ ನಡೆದಿದೆ. ಈ ವ್ಯಕ್ತಿಯನ್ನ ಬಂಧಿಸಿದ್ದು, ಆತನನ್ನ ನೂರ್‌ ಆಲಮ್‌ ಅಂತ ಗುರುತಿಸಲಾಗಿದೆ. ಕಪ್ಪು ಕಾರಿನಲ್ಲಿ ಬಂದಿದ್ದ ವ್ಯಕ್ತಿ ಪೊಲೀಸರಂತೆ ನಟಿಸಿ ಮಮತಾ ಅವ್ರ ನಿವಾಸವಿರುವ ಕೊಲ್ಕತ್ತಾದ ಹರೀಶ್‌ ಚಟರ್ಜಿ ಸ್ಟ್ರೀಟ್‌ಗೆ ಪ್ರವೇಶಿಸೋಕೆ ಪ್ರಯತ್ನಿಸಿದ್ದಾನೆ. ಅಲ್ದೇ ಈತ ತಾನು ಪೊಲೀಸ್‌ ಅಧಿಕಾರಿ ಹಾಗೂ ಮಮತಾರನ್ನ ಭೇಟಿಯಾಗಲು ಬಂದಿದ್ದೇನೆ ಅಂತ ಹೇಳಿಕೊಂಡಿದ್ದ. ಈತನ ಬಳಿ ವಿವಿಧ ಏಜೆನ್ಸಿಗಳಿಗೆ ಸೇರಿದ ಹಲವಾರು ಫೇಕ್‌ ಐಡಿಗಳಿದ್ದವು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ನಡೆದಾಗ ದೀದಿ ಮನಯಲ್ಲೇ ಇದ್ರು. ಇನ್ನು ಈ ವಿಷಯವನ್ನ ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply