ಮಧ್ಯಪ್ರದೇಶ ಸೆಕ್ಸ್ ರಾಕೆಟ್‍ಗೆ RSS ಕಾರಣ: ನಾಲಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ

ಮಧ್ಯಪ್ರದೇಶದಲ್ಲಿ ನಡೆದ ಲೈಂಗಿಕ ಹಗರಣಕ್ಕೆ RSS ಕಾರಣ ಅಂತ ಕಾಂಗ್ರೆಸ್ ನಾಯಕರೊಬ್ಬರು ನಾಲಗೆ ಹರಿಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ನಾಯಕ ಮಾನಕ್ ಅಗರ್ ವಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಮದುವೆಯಾಗೋದಿಲ್ಲ. ಇದೇ ಹನಿಟ್ರ್ಯಾಪ್‍ಗೆ ಪ್ರಮುಖ ಕಾರಣ. ಅವರಿಗೆ ಮದುವೆ ಮಾಡಬೇಕು. ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೂ ಮದುವೆ ಮಾಡಿಸಬೇಕು ಎಂದು ನಾಲಗೆ ಹರಿಬಿಟ್ಟಿದ್ದಾರೆ.

ತನಿಖೆಗಾಗಿ ಎಸ್‍ಐಟಿ ತಂಡ ರಚಿಸಲಾಗಿದ್ದು, ಅವರು ತನಿಖೆ ನಡೆಸುತ್ತಿದ್ದಾರೆ. ಈ ಲೈಂಗಿಕ ಹಗರಣ ಬಿಜೆಪಿಯ ಶಿವರಾಜ್ ಸಿಂಗ್ ಚೌವ್ಹಾಣ್ ಸಿಎಂ ಆಗಿದ್ದಾಗಲೇ ಶುರುವಾಗಿತ್ತು. ಅಲ್ಲದೆ ಭಾರಿ ಸಂಖ್ಯೆಯ ಬಿಜೆಪಿ ನಾಯಕರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಐದರಿಂದ 6 ರಾಜ್ಯಗಳಲ್ಲಿ ಈ ಹನಿಟ್ರ್ಯಾಪ್ ಜಾಲ ಹರಡಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶ ಪೊಲೀಸರು ಹನಿಟ್ರ್ಯಾಪ್ ನಡೆಸುತ್ತಿದ್ದ ಗ್ಯಾಂಗ್ ಒಂದನ್ನು ಹಿಡಿದಿದ್ದರು. ಆದ್ರೆ ಅವರ ವಿಚಾರಣೆ ವೇಳೆ ಇದರ ಹಿಂದೆ ದೊಡ್ಡ ಜಾಲ ಇರೋದು ಪತ್ತೆಯಾಗಿದೆ. ಅವರ ಬಳಿ ಸಾವಿರಕ್ಕೂ ಹೆಚ್ಚು ವಿಡಿಯೋ ಕ್ಲಿಪ್‍ಗಳು ಪತ್ತೆಯಾಗಿದ್ದು, ರಾಜಕಾರಣಿಗಳು ಮತ್ತು ಮಾಜಿ ಮಂತ್ರಿಗಳೂ ಸೇರಿದ್ದಾರೆ. ಅಲ್ಲದೆ ಬಾಲಿವುಡ್ ನಟಿಯರ ಹೆಸರು ಕೂಡ ಇದರಲ್ಲಿ ಕೇಳಿಬಂದಿದೆ.

Contact Us for Advertisement

Leave a Reply