ಮಹಿಳೆಯ ರಂಪಾಟ, ಮಾರ್ಗಮದ್ಯೆ ಲ್ಯಾಂಡ್‌ ಆದ ವಿಮಾನ !

masthmagaa.com:

ಮಗು ಅಳ್ತಿದೆ ಅಂತ ಹೇಳಿ ವಿಮಾನದ ದಿಕ್ಕನ್ನೇ ಬದಲಾಯಿಸಿದ ಘಟನೆ ಯುರೋಪ್‌ ನಲ್ಲಿ ನಡೆದಿದೆ. ಲಂಡನ್‌ ಏರ್ವೇಸ್‌ ಗೆ ಸೇರಿದ ವಿಮಾನವೊಂದು ಮ್ಯಾಂಚೆಸ್ಟರ್‌ನಿಂದ ಟರ್ಕಿ ಕಡೆಗೆ ಹೋಗುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ತನ್ನ ಮಗು ಅಳ್ತಿದೆ ವಿಮಾನ ನಿಲ್ಸಿ ಅಂತ ಅಲ್ಲಿನ ಸಿಬ್ಬಂದಿಗೆ ಒತ್ತಾಯ ಮಾಡಿದ್ದಾರೆ.ಆದ್ರೆ ಇದಕ್ಕೆ ಅಲ್ಲಿನ ಸಿಬ್ಬಂದಿ ಒಪ್ಪಿಲ್ಲ. ಇದರಿಂದ ಕೋಪಗೊಂಡ ಮಹಿಳೆ ವಿಮಾನದ ಸಿಬ್ಬಂದಿಯನ್ನ ಹಿಗ್ಗಾ ಮುಗ್ಗಾ ಬೈದಿದ್ದಾರೆ.ಅಲ್ಲದೇ ವಿಮಾನದ ತುಂಬಾ ಕೇಳಿಸೋವಷ್ಟು ಕಿರುಚಿ ಹೈಡ್ರಾಮ ಸೃಷ್ಟಿಸಿದ್ದಾರೆ. ಅಲ್ದೇ ಈ ಕೂಡಲೇ ವಿಮಾನವನ್ನ ಲ್ಯಾಂಡ್‌ ಮಾಡಿ ಅಂತ ಪಟ್ಟು ಹಿಡಿದಿದ್ದಾರೆ. ಈ ವೇಳೆ ಸಿಬ್ಬಂದಿ ಎಷ್ಟೇ ಸಮಾಧಾನ ಮಾಡೋಕೆ ಮುಂದಾಗಿದ್ರು ಕೂಡ ಮಹಿಳೆ ಮಾತ್ರ ಚೂರು ತಗ್ಗಲಿಲ್ಲ ಅಂತ ಅಲ್ಲಿನ ಸಹ ಪ್ರಯಾಣಿಕರು ಮಾಹಿತಿ ನೀಡಿದ್ರು. ಇನ್ನು ಮಹಿಳೆಯ ರಂಪಾಟದಿಂದ ಕಂಗಾಲಾದ ಸಿಬ್ಬಂದಿ ಆಸ್ಟ್ರೀಯಾದ ವಿಯೆನ್ನಾ ಏರ್ಪೋರ್ಟ್‌ ನಲ್ಲಿ ವಿಮಾನ ಲ್ಯಾಂಡ್‌ ಮಾಡಿ ಸದ್ಯ ಮಹಿಳೆಯನ್ನ ಹಾಗು ಆಕೆಯ ಮಗುವನ್ನ ಇಳಿಸಿ ಪುನಃ ಟೇಕಾಫ್‌ ಆಗಿದೆ.

-masthmagaa.com

Contact Us for Advertisement

Leave a Reply