ಮಂಡ್ಯದಲ್ಲಿ ಮನೆ ಮಾಡಿದ ಧ್ವಜದ ದಂಗಲ್: ಹನುಮನಿಗಾಗಿ ಭಾರಿ ವಾಗ್ವಾದ!

masthmagaa.com:

ಹನುಮ ಧ್ವಜದ ವಿಚಾರವಾಗಿ ಜನರು ಮತ್ತು ಸರ್ಕಾರದ ನಡುವೆ ಭಾರೀ ಹೈಡ್ರಾಮ ನಡೆದ ಘಟನೆ ಮಂಡ್ಯದಲ್ಲಿ ವರದಿಯಾಗಿದೆ. 108 ಅಡಿ ಎತ್ತರದ ಹನುಮ ಧ್ವಜವನ್ನ ಪೋಲಿಸರು ತೆರವು ಗೊಳಿಸಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ನಂತ್ರ ಘಟನೆ ರಾಜಕೀಯ ತಿರುವು ಪಡೆದಿದೆ. ಅಂದ್ಹಾಗೆ ಜನವರಿ 22ರ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು 108 ಅಡಿ ಧ್ವಜ ಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ಪಂಚಾಯಿತಿಗೆ ಪರ್ಮಿಶನ್ ಕೇಳಿದ್ರು. ಆದ್ರೆ ಇದಕ್ಕೆ ಒಪ್ಪದ ಪಂಚಾಯತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಬಿಟ್ಟು ಬೇರೆ ಧ್ವಜ ಹಾರಿಸಬಾರದು ಅಂತ ಹೇಳಿತ್ತು. ಇದ್ರಿಂದ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ಕೊನೆಗೂ ಹನುಮ ಧ್ವಜ ಹಾರಿಸಿದ್ದಾರೆ. ಈ ವಿಷ್ಯಕ್ಕೆ ಕೆಲವ್ರು ವಿರೋಧ ವ್ಯಕ್ತ ಪಡಿಸಿದ ಪರಿಣಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ‌ ಈ ಬಗ್ಗೆ ಚರ್ಚೆಯಾಗಿದೆ. ಆ ವೇಳೆ 22 ಗ್ರಾಮ ಪಂಚಾಯತಿ ಸದಸ್ಯರ ಪ್ಯಕಿ 20 ಸದಸ್ಯರು ಹನುಮ ಧ್ವಜ ಹಾರಾಟಕ್ಕೆ ಬೆಂಬಲಿಸಿದ್ದಾರೆ. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಪಡಿಸಿದ್ದಾರೆ. ಆದ್ರೆ ಮಂಡ್ಯ ಜಿಲ್ಲಾಡಳಿತ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ. ಹೀಗಾಗಿ ಅದನ್ನ ತೆರವುಗೊಳಿಸಬೇಕು ಅಂತ ಮೌಖಿಕ ಆದೇಶ ನೀಡಿದೆ. ಇದರಂತೆ ಧ್ವಜ ತೆರವು ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮಕ್ಕೆ ಬಂದ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ತದನಂತ್ರ ಮಂಡ್ಯ ಎಸಿ ನೇತೃತ್ವದಲ್ಲಿ ಮತ್ತೆ ಅಧಿಕಾರಿಗಳು ಜನವರಿ 27ರ ನಸುಕಿನ ಜಾವ ಗ್ರಾಮಕ್ಕೆ ಆಗಮಿಸಿ ಧ್ವಜ ತೆರವುಗೊಳಿಸಲು ಯತ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಪ್ರತಿಭಟನೆ ತೀವ್ರಗೊಳಿಸಿದ್ರು. ಇದ್ರಿಂದ ಆಕ್ರೋಶಗೊಂಡ ಪೋಲಿಸರು 144 ಸೆಕ್ಷನ್​ ಜಾರಿ ಮಾಡಿ ಧ್ವಜ ಇಳಿಸಿದ್ದಾರೆ. ಅಲ್ಲದೇ ರಾಷ್ಟ್ರಧ್ವಜ ಹಾರಿಸಿದ್ದಾರೆ. ಇದ್ರಿಂದ ಈ ವಿವಾದ ಇನ್ನಷ್ಟು ತೀವ್ರ ಸ್ವರೂಪ ಪಡೆದಿದೆ. ಅಷ್ಟೊತ್ತಿಗೆ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಡಿಸಿಎಂ ಅಶ್ವತ್‌ ನಾರಾಯಣ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತರು ಧ್ವಜಸ್ತಂಭಕ್ಕೆ ರಾಮನ ಫೆಕ್ಸ್ ಕಟ್ಟಿದ್ದಾರೆ. ಹೀಗಾಗಿ ಸ್ಥಳದಲ್ಲಿ ಇನ್ನಷ್ಟು ಉದ್ವಿಗ್ನ ವಾತಾವರಣ ಉಂಟಾಗಿದೆ. ಅಲ್ಲದೇ ಪೋಲಿಸರು-ಪ್ರತಿಭಟನಾಕಾರರ ಮಧ್ಯೆ ಜಟಾಪಟಿ ಉಂಟಾಗಿ ಬ್ಯಾರಿಕೇಡ್‌ ತಳ್ಳಾಟ ಜೋರಾಗಿದೆ. ಬಳಿಕ ಪೋಲಿಸರು ಲಾಠಿ ಚಾರ್ಜ್‌ ನಡೆಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. ಅಲ್ಲದೇ ಬಿಜೆಪಿ ನಾಯಕರನ್ನ ವಶಕ್ಕೆ ಪಡೆದು ನಂತರ ಬಿಟ್ಟಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿರೋ ಸಿಎಂ ಸಿದ್ದರಾಮಯ್ಯ, ರಾಷ್ಟ್ರ ಧ್ಬಜ ಹಾರಿಸುವ ಬದಲು ಭಗವಾ ಧ್ವಜ ಹಾರಿಸಿದ್ದು ಸರಿಯಲ್ಲ ಅಂತ ಹೇಳಿದ್ದಾರೆ. ಅತ್ತ ಆರ್‌.ಅಶೋಕ್‌, “ಮಧ್ಯಾಹ್ನ ಕಾನೂನು ಬಾಹಿರವಾಗಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಇವ್ರ ಮನಸ್ಸಲ್ಲಿ ಟಿಪ್ಪು ಸುಲ್ತಾನ್‌ ಇದಾನೆ, ಇದು ಕಾಂಗ್ರೆಸ್‌ ಸರ್ಕಾರದ ಗೂಂಡಾ ವರ್ತನೆ. ಹನುಮ ಹುಟ್ಟಿದ ನಾಡಲ್ಲೆ ಅಪಮಾನ ಮಾಡಿದ್ದಾರೆ ಅಂತ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಅಲ್ಲದೇ ದತ್ತಪೀಠ ಮಾದರಿಯಲ್ಲಿ ಹೋರಾಟ ಮಾಡ್ತೀವಿ ಅಂದಿದ್ದಾರೆ. ಸಚಿವ ಎನ್​.ಚಲುವರಾಯಸ್ವಾಮಿ ಇದರಲ್ಲಿ ಯಾರು ರಾಜಕೀಯ ಮಾಡ್ಬಾರ್ದು. ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನ ಹಾರಿಸುವಂತಿಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply