ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್!

masthmagaa.com:

ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವ್ರ ರಾಜಕೀಯ ನಡೆ ಇಂದು ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲವಿದೆ. ಮೋದಿಯವ್ರ ನಾಯಕತ್ವದಲ್ಲಿ ದೇಶ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ. ಮೋದಿ ಲೀಡರ್‌ಶಿಪ್‌ನ್ನ ನಂಬಿದ್ದೇನೆ. ಹೀಗಾಗಿ ಬಿಜೆಪಿಗೆ ಬೆಂಬಲ ನೀಡ್ತೀದಿನಿ ಅಂತ ಬಹಿರಂಗವಾಗಿ ಸುಮಲತಾ ಘೋಷಿಸಿದ್ದಾರೆ. ಇನ್ನು ಈಗ ಬಿಜೆಪಿ ಸೇರಿದ್ರೆ ಸಂಸದೆ ಸ್ಥಾನದಿಂದ ಅನರ್ಹಗೊಳ್ಳುವ ಹಿನ್ನೆಲೆ ಸುಮಲತಾ ಅಧಿಕೃತವಾಗಿ ಬಿಜೆಪಿಗೆ ಸೇರುವ ಬದಲು ಬಾಹ್ಯ ಬೆಂಬಲ ಮಾತ್ರ ಘೋಷಿಸಿದ್ದಾರೆ. ಅಂದ್ಹಾಗೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಗೆದ್ದಿರೊ ಅಭ್ಯರ್ಥಿ ಯಾವುದೇ ಪಕ್ಷವನ್ನ 6 ತಿಂಗಳ ಒಳಗೆ ಸೇರಬೇಕು. 6 ತಿಂಗಳ ನಂತರ ಸೇರಿದ್ರೆ ಅನರ್ಹರಾಗ್ತಾರೆ. ಇದೀಗ ಸುಮಲತಾ ಅವ್ರಿಗೂ ಇದೇ ಕಾನೂನು ತೊಡಕು ಇರೋದ್ರಿಂದ ಬಿಜೆಪಿಗೆ ಸದ್ಯಕ್ಕೆ ಸೇರಿಲ್ಲ. ಇತ್ತ ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ಅವರು ದೊಡ್ಡವರು, ದೊಡ್ಡ ಪಕ್ಷಕ್ಕೆ ಸೇರ್ತಿದಾರೆ ಅಂತ ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ. ಹೀಗಾಗಿ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದು ನಮಗೆ ಸಂಬಂಧಿಸಿದ ವಿಚಾರವಲ್ಲ ಅಂತ ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply