ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ‘ನಿಫಾ’ ನೆಗೆಟಿವ್​!

masthmagaa.com:

ನಿಫಾ ಸೋಂಕಿನ ಭಯದಿಂದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್‌ ಬಂದಿದೆ ಅಂತ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಸೋ ಮಂಗಳೂರು ಮತ್ತು ರಾಜ್ಯದ ಜನತೆ ಸದ್ಯಕ್ಕೆ ನಿಫಾ ಆತಂಕದಿಂದ ನಿರಾಳರಾಗಿದ್ದಾರೆ. ಕಾರವಾರ ಮೂಲದ ಈ ವ್ಯಕ್ತಿ ಗೋವಾದ ನಿಫಾ ಟೆಸ್ಟ್ ಕಿಟ್​​ ಲ್ಯಾಬ್​ನಲ್ಲಿ ಕೆಲಸ ಮಾಡ್ತಿದ್ದ. ರಜೆ ಮೇಲೆ ಊರಿಗೆ ಬಂದಿದ್ದ ಇವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ನಿಫಾ ತಗುಲಿರಬಹುದು ಅಂತ ಆತಂಕಗೊಂಡು ಆಸ್ಪತ್ರೆಗೆ ದಾಖಲಾಗಿದ್ರು.

-masthmagaa.com

Contact Us for Advertisement

Leave a Reply