ಮಣಿಪುರದಲ್ಲಿ ಮತ್ತೆ ತಲೆ ಎತ್ತಿದೆ ಹಿಂಸಾಚಾರ: 13 ಮಂದಿ ಬಲಿ

masthmagaa.com:

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೇ 2023 ರಿಂದ ಒಂದಲ್ಲಾ ಒಂದು ಹಿಂಸಾಚಾರ ವರದಿಯಾಗ್ತಲೇ ಇದೆ. ಇದೀಗ ಅಲ್ಲಿನ ಎರಡು ಉಗ್ರಗಾಮಿ ಗುಂಪುಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ 13 ಮಂದಿ ಮೃತಪಟ್ಟಿರೋದು ವರದಿಯಾಗಿದೆ. ಈ ಘಟನೆ ಮಣಿಪುರದ ತೆಂಗನೌಪಾಲ್‌ ಜಿಲ್ಲೆಯಲ್ಲಿ ಡಿಸೆಂಬರ್‌ 4 ರಂದು ನಡೆದಿದೆ. ಅಂದ್ಹಾಗೆ ಒಂದು ಉಗ್ರಗಾಮಿ ಗುಂಪು ಮಯನ್ಮಾರ್‌ ಕಡೆ ಹೋಗ್ತಿರೋವಾಗ, ಆ ಏರಿಯಾದಲ್ಲಿ ಪ್ರಬಲವಾಗಿರೋ ಮತ್ತೊಂದು ಉಗ್ರಗಾಮಿ ಗುಂಪೊಂದು ಸಡನ್‌ ಆಗಿ ದಾಳಿ ನಡೆಸಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಆದ್ರೆ ಇವ್ರು ಇಲ್ಲಿನ ಲೋಕಲ್ಸ್‌ ಅಲ್ಲ ಅಂತ ಅಲ್ಲಿನ ಅಧಿಕಾರಿ ತಿಳಿಸಿದ್ದು, ಈ ಕುರಿತು ತನಿಖೆ ನಡೆಸಲಾಗ್ತಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಡಿಸೆಂಬರ್‌ 3 ರಂದು ಮಣಿಪುರಾದ್ಯಂತ ಮೊಬೈಲ್‌ ಇಂಟರ್‌ನೆಟ್‌ ಸೇವೆ ಮೇಲೆ ಹೇರಲಾದ ಬ್ಯಾನ್‌ನ್ನ ಮಣಿಪುರ ಸರ್ಕಾರ ತೆಗೆದು ಹಾಕಿದೆ. ಆದ್ರೆ ಕೆಲ ಏರಿಯಾಗಳಿಗೆ ಮಾತ್ರ ಡಿಸೆಂಬರ್‌ 18ರ ತನಕ ಮೊಬೈಲ್‌ ಇಂಟರ್‌ನೆಟ್‌ ಮೇಲೆ ಹೇರಲಾದ ಬ್ಯಾನ್‌ ಕಂಟಿನ್ಯೂ ಆಗಲಿದೆ ಅಂತ ಅಲ್ಲಿನ ಸರ್ಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply