ಫಿಲಿಪ್ಪೀನ್ಸ್ ಅಧ್ಯಕ್ಷನಾಗಲು ಹೊರಟ ಬಾಕ್ಸಿಂಗ್ ಸ್ಟಾರ್ ಪಕ್ಯಾವ್

masthmagaa.com:

ಬಾಕ್ಸಿಂಗ್ ಸ್ಟಾರ್ ಮ್ಯಾನಿ ಪಕ್ಯಾವ್ ಫಿಲಿಪೀನ್ಸ್ ನಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡೋದಾಗಿ ಘೋಷಿಸಿದ್ದಾರೆ. ಮುಂದಿನ ವರ್ಷವೇ ಚುನಾವಣೆ ಇದೆ. ಕಳೆದ ಕೆಲದಿನಗಳಿಂದ ಪಕ್ಯಾವ್ ಫಿಲಿಪೀನ್ಸ್ ನಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ರು. ಈಗಿನ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆ ಚೀನಾ ಪರ ಅಂತ ಟೀಕೆ ಮಾಡಿದ್ರು. ಆಡಳಿತಾರೂಡ PDP-Laban Partyಯಲ್ಲಿ ಈಗ ಎರಡು ಬಣಗಳಾಗಿವೆ. ಒಂದು ಬಣ ಮ್ಯಾನಿ ಪಕ್ಯಾವ್ ಪರ ಇದ್ದರೆ ಮತ್ತೊಂದು ಬಣ ಹಾಲಿ ಅಧ್ಯಕ್ಷ ಡ್ಯಟರ್ಟೆಯ ಗೆಳೆಯ, ಸೆನೆಟರ್ ಕೂಡ ಆಗಿರೋ ಕ್ರಿಸ್ಟೋಫರ್ ಬೋಂಗ್’ಗೋ ಗೆ ಬೆಂಬಲ ನೀಡಿದೆ. ಇದೇ ಗುಂಪು ಡ್ಯುಟರ್ಟೆಯನ್ನ ಉಪಾಧ್ಯಕ್ಷ ಸ್ಥಾನಕ್ಕೆ ನಾಮಿನೇಟ್ ಮಾಡಿದೆ. ಯಾಕಂದ್ರೆ ಫಿಲಿಪೀನ್ಸ್ ಸಂವಿಧಾನದ ಪ್ರಕಾರ ಆಧ್ಯಕ್ಷೀಯ ಅವಧಿ 6 ವರ್ಷ. ಆದ್ರೆ ಒಬ್ಬನೇ ವ್ಯಕ್ತಿ ಸೆಕೆಂಡ್ ಟರ್ಮ್ ಅಧಿಕಾರ ನಡೆಸುವಂತಿಲ್ಲ. ಹೀಗಾಗಿ ಡ್ಯುಟರ್ಟಿ ತಮ್ಮ ಗೆಳೆಯನನ್ನ ಅಧ್ಯಕ್ಷ ಮಾಡಿ, ತಾವು ಉಪಾಧ್ಯಕ್ಷ ಆಗಿ, ಹಿಂಬಾಗಿಲಿನ ಮೂಲಕ ಅಧಿಕಾರವನ್ನ ಕಂಟ್ರೋಲ್ ಮಾಡೋಕೆ, ಸ್ಕೀಮು ಹಾಕಿದ್ದಾರೆ ಅನ್ನೋದು ಪಕ್ಯಾವ್ ಬಣದ ಆರೋಪ. ಈ ಬಗ್ಗೆ ಮಾತಾಡಿರೋ 42 ವರ್ಷದ ಮ್ಯಾನಿ ಪಕ್ಯಾವ್, ನಾನು ಬಾಕ್ಸಿಂಗ್ ರಿಂಗ್ ಒಳಗಿದ್ದರೂ ಫೈಟರ್, ಹೊರಗಿದ್ದರೂ ಫೈಟರ್… ನಾನು ಈ ಚುನಾವಣೆಯನ್ನ ಅದೇ ಸ್ಪಿರಿಟ್ ನಲ್ಲಿ ಫೈಟ್ ಮಾಡ್ತೀನಿ ಅಂದಿದ್ದಾರೆ.

-masthmagaa.com

Contact Us for Advertisement

Leave a Reply