ವೈಟ್‌ ಹೌಸ್‌ನಲ್ಲಿ ಸಿಕ್ತು ಟ್ರಂಪ್‌ಗೆ ಬರೆದ ಪ್ರೇಮ ಪತ್ರಗಳ ರಾಶಿ!

masthmagaa.com:

ಉತ್ತರ ಕೊರಿಯಾ ಕ್ಷಿಪಣಿಗಳ ಕಾರ್ಯಕ್ರಮಗಳನ್ನ ಬಿಟ್ಟು ತನ್ನ ಜನರ ಅಗತ್ಯತೆಗಳ ಬಗ್ಗೆ ಫೋಕಸ್‌ ಮಾಡಬೇಕು ಅಂತ ವಿಶ್ವಸಂಸ್ಥೆಯ ಅಮೇರಿಕದ ರಾಯಭಾರಿ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಲಿಂಡಾ “ಡಿಪಿಆರ್‌ಕೆ (ಅಂದ್ರೆ ಡೆಮಾಕ್ರಟಿಕ್‌ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಕೊರಿಯಾ) ಮಾನವ ಹಕ್ಕುಗಳನ್ನು ಗೌರವಿಸಿ, ಅಕ್ರಮ ಸಮೂಹ ವಿನಾಶದ ಆಯುಧಗಳು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ತೊರೆದು, ತನ್ನ ಜನರ ಅಗತ್ಯತೆಗಳ ಬಗ್ಗೆ ಪ್ತಾತಿನಿಧ್ಯ ಕೊಡಬೇಕು, ತನ್ನ ಜನರ ಒಳಿತಿಗೆ ಬದ್ಧವಾಗಬೇಕು” ಅಂತ ಕರೆ ನೀಡಿದ್ದಾರೆ. UNSCಯ ಈ ತಿಂಗಳ ಅಧ್ಯಕ್ಷ ಸ್ಥಾನ ರಷ್ಯಾಗೆ ಇರುವದರಿಂದ ಉತ್ತರ ಕೊರಿಯ ಮೇಲಿನ ಹೇರಿಕೆಗಳನ್ನು ಚರ್ಚೆಯ ವಿಷಯವನ್ನಾಗಿ ಇಟ್ಟಿತ್ತು. ಆದ್ರೆ ವಿಶ್ವಸಂಸ್ಥೆಯ ರಷ್ಯಾ ರಾಯಭಾರಿ ವಾಸಿಲಿ ನೆಬೆಂಜಿಯಾಗೆ ಕೋವಿಡ್‌ ಬಂದಿದ್ದರಿಂದ ಹಾಜರಿರಲಿಲ್ಲ.

-masthmagaa.com

Contact Us for Advertisement

Leave a Reply