ಹೆಣ್ಮಕ್ಕಳ ಮದುವೆಯ ಕನಿಷ್ಠ ವಯಸ್ಸು ಏರಿಸೋ ಮಸೂದೆ ಮಂಡನೆ!

masthmagaa.com:

ಇತ್ತ ರಾಜ್ಯದಲ್ಲಿ ಪ್ರಮುಖ ವಿದೇಯಕ ಮಂಡನೆಯಾದಂತೆ ಅತ್ತ ಕೇಂದ್ರದಲ್ಲೂ ಮಹತ್ವದ ಬಿಲ್​ವೊಂದು ಮಂಡನೆಯಾಗಿದೆ. The Prohibition of Child Marriage (Amendment) Bill, 2021 ಅನ್ನ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಹೆಣ್ಣುಮಕ್ಕಳ ಕನಿಷ್ಠ ಮದ್ವೆ ವಯಸ್ಸನ್ನ 18 ವರ್ಷದಿಂದ 21 ವರ್ಷಕ್ಕೆ ಏರಿಸೋ ಬಿಲ್​ ಇದಾಗಿದೆ. ಈ ಬಿಲ್​ ಪಾಸಾಗಿ ಕಾನೂನಾದ್ರೆ ಹೆಣ್ಣು ಮತ್ತು ಗಂಡು ಇಬ್ಬರ ಮದ್ವೆ ವಯಸ್ಸು ಕೂಡ 21 ಆಗಲಿದೆ.

ಇನ್ನು ಈ ಮಸೂದೆಯನ್ನ ಮಂಡನೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಸಿಟ್ಟಾಗಿವೆ. ಕಾಂಗ್ರೆಸ್ ನಾಯಕ ಅಧಿರ್​ ರಂಜನ್​ ಚೌಧರಿ ಮಾತನಾಡಿ, ಹೆಣ್ಣುಮಕ್ಕಳ ಮದ್ವೆ ವಯಸ್ಸನ್ನ ಹೆಚ್ಚಿಸುವ ವಿಚಾರದ ಬಗ್ಗೆ ದೇಶಾದ್ಯಂತ ಸಾಕಷ್ಟು ಪರ ವಿರೋಧ ಚರ್ಚೆ ನಡೀತಿದೆ. ಕೇಂದ್ರ ಸರ್ಕಾರ ಎಲ್ಲರ ಅಭಿಪ್ರಾಯ ಪಡೀಬೇಕಿತ್ತು. ಅಲ್ಲದೆ ಮಸೂದೆಯನ್ನ ಸ್ಟಾಂಡಿಂಗ್ ಕಮಿಟಿಗೆ ಕಳಿಸಬೇಕಿತ್ತು ಎಂದಿದ್ದಾರೆ. ಎಐಎಂಐಎಂ ಪಕ್ಷದ ಸಂಸದ ಅಸಾದುದ್ದಿನ್ ಓವೈಸಿ ಮಾತನಾಡಿ, ಇದು ಸಂವಿಧಾನ ನಮ್ಗೆ ನೀಡಿರೋ ಸ್ವಾತಂತ್ರ್ಯದ ವಿರುದ್ಧವಾಗಿದೆ. 18 ವರ್ಷದವರು ಪ್ರಧಾನಿಯನ್ನ ಆಯ್ಕೆ ಮಾಡ್ಬೋದು ಅಂದ್ರೆ, ಲೀವ್​ ಇನ್​ ರಿಲೇಷನ್​​ಶಿಪ್​​ನಲ್ಲಿ ಇರಬಹುದು ಅಂದ್ಮೇಲೆ ಮತ್ಯಾಕೆ 18 ವರ್ಷದ ಹೆಣ್ಣುಮಕ್ಕಳು ಮದ್ವೆ ಆಗದಂತೆ ತಡೀತಿದ್ದೀರಿ ಅಂತ ಆಕ್ರೋಶ ಹೊರಹಾಕಿದ್ದಾರೆ. ಇದರ ಜೊತೆಗೆ ಎನ್​ಸಿಪಿಯ ಸುಪ್ರಿಯಾ ಸುಲೆ, ಡಿಎಂಕೆಯ ಕನಿಮೋಳಿ, ತೃಣಮೂಲ ಕಾಂಗ್ರೆಸ್​ ಮುಂತಾದ ಪಕ್ಷದವರು ವಿರೋಧಿಸಿದ್ದಾರೆ.

ಟೀಕೆಗಳಿಗೆ ಉತ್ತರಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ವೈವಾಹಿಕ ಜೀವನಕ್ಕೆ ಪ್ರವೇಶಿಸಲು ಗಂಡು ಮತ್ತು ಹೆಣ್ಣುಮಕ್ಕಳು ಸಮಾನ ಹಕ್ಕು ಕೊಡೋಕೆ ನಮ್ಮ ದೇಶ 75 ವರ್ಷ ತಡ ಮಾಡಿದೆ. ಈಗ ಈ ತಿದ್ದುಪಡಿ ಮೂಲಕ ಗಂಡು ಮತ್ತು ಹೆಣ್ಣು ಮಕ್ಕಳು ಮದ್ವೆ ಬಗ್ಗೆ 21 ವಯಸ್ಸಿನಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಮಾನ ಅವಕಾಶ ಕೊಡಲಾಗ್ತಿದೆ ಎಂದ್ರು. ಉತ್ತರಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹೆಣ್ಣುಮಕ್ಕಳಿಗೆ ಓದಲು ಇನ್ನಷ್ಟು ಸಮಯ ಕೊಡುವ ಉದ್ದೇಶದಿಂದ ಮತ್ತು ಗಂಡು ಮಕ್ಕಳ ಥರ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶಗಳನ್ನ ಕೊಡೋ ಉದ್ದೇಶದಿಂದ ಈ ಕಾನೂನನ್ನ ತರ್ತಾ ಇದ್ದೀವಿ ಎಂದಿದ್ದಾರೆ. ಮತ್ತೊಂದುಕಡೆ ನಿನ್ನೆ ಲೋಕಸಭೆಯಲ್ಲಿ ನಿನ್ನೆ ಪಾಸ್​ ಆಗಿದ್ದ The Election Laws (Amendment) Bill, 2021 ಇವತ್ತು ರಾಜ್ಯಸಭೆಯಲ್ಲಿ ಪಾಸ್​ ಆಗಿದೆ.

-masthmagaa.com

Contact Us for Advertisement

Leave a Reply