ಚೀನಾದಲ್ಲಿ ಶಿ ಜಿನ್‌ಪಿಂಗ್ Life-Time ಪಟ್ಟಾಭಿಷೇಕಕ್ಕೆ ತಯಾರಿ ಆರಂಭ!

masthmagaa.com:

ಚೀನಾಗೆ ಪ್ರಜಾಪ್ರಭುತ್ವ ದೇಶಗಳನ್ನು ಕಂಡರೆ ಆಗಲ್ಲ. ಯಾಕಂದ್ರೆ ಕಮ್ಯುನಿಸ್ಟ್ ಚೀನಾದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಈಗಾಗಲೇ ಕಮ್ಯುನಿಸ್ಟ್ ಸರ್ವಾಧಿಕಾರದ ದೇಶ ಅಂತ ಬ್ರಾಂಡ್ ಆಗಿರೋ ಚೀನಾದಲ್ಲಿ ಈಗ ಶಿ ಜಿನ್‌ಪಿಂಗ್ ಅನ್ನೋ ಆಧುನಿಕ ಸರ್ವಾಧಿಕಾರಿಯ life-time ಪಟ್ಟಾಭಿಷೇಕಕ್ಕೆ ತಯಾರಿ ಆರಂಭವಾಗಿದೆ. ಮುಂದಿನವಾರ ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ಸೆಂಟ್ರಲ್ ಕಮಿಟಿಯ ಸಭೆ ಬೀಜಿಂಗ್ನಲ್ಲಿ ನಡೆಯಲಿದೆ. ಇದರಲ್ಲಿ 400ಕ್ಕೂ ಅಧಿಕ ಸದಸ್ಯರು ಭಾಗಿಯಾಗಲಿದ್ದಾರೆ. ನಾಲ್ಕು ದಿನಗಳ ಈ ಸಭೆ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯಲಿದೆ.‌ ಈ ಸಭೆಯಲ್ಲಿ ಅಂಗೀಕಾರ ಮಾಡಲಾಗುವ ನಿರ್ಣಯ ಚೀನಾದಲ್ಲಿ ಐತಿಹಾಸಿಕ ವಾಗಲಿದೆ ಅಂತ ಗುಸುಗುಸು ಶುರುವಾಗಿದೆ. ಈ ನಿರ್ಣಯದ ಮೂಲಕ ಹಾಲಿ ಅಧ್ಯಕ್ಷ ಶಿ ಜಿನ್ಪಿಂಗ್ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ, ಹಾಗೂ ಚೀನಾದ ಸರ್ವೋಚ್ಛ ನಾಯಕ ಅಂತ ಅವರನ್ನು ಗುರುತಿಸಲಾಗುತ್ತದೆ ಅಂತ ಹೇಳಲಾಗುತ್ತಿದೆ. ಇದುವರೆಗೂ ಚೀನಾದ ಇತಿಹಾಸದಲ್ಲಿ ಕೇವಲ ಎರಡು ಬಾರಿ ಮಾತ್ರ ಸೆಂಟ್ರಲ್ ಕಮಿಟಿ ಇಂತಹ ನಿರ್ಣಯಗಳನ್ನು ಅಂಗೀಕರಿಸಿದೆ. ಮೊದಲ ಸಲ ಅಂದರೆ ಅದು 1945 ರಲ್ಲಿ ಮಾವೋರನ್ನ ಸುಪ್ರೀಂ ಲೀಡರ್ ಅಂತ ಘೋಷಿಸಲು. ಎರಡನೇ ಸಲ ಸಾವಿರದ ಒಂಬೈನೂರ 81ರಲ್ಲಿ ಡೆಂಗ್ ಶಾವೋಪಿಂಗ್ ಕಾಲದಲ್ಲಿ ತೆಗೆದುಕೊಂಡ ನಿರ್ಣಯ. ಆಗ ಚೀನಾದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲಾಗಿತ್ತು. ಮಾವೋ ಕಾಲದಲ್ಲಿ ಜಾರಿಯಲ್ಲಿದ್ದ ಆರ್ಥಿಕ ನೀತಿಗಳು ತಪ್ಪು ಅಂತ ಇದರಲ್ಲಿ ಒಪ್ಪಿಕೊಳ್ಳಲಾಗಿತ್ತು. ಈಗ ಮೂರನೇ ಸಲ ಜಿನ್ಪಿಂಗ್ ಅವಧಿಯಲ್ಲಿ ಸೆಂಟ್ರಲ್ ಕಮಿಟಿ ಸಭೆ ಸೇರಿ ರೆಸಲ್ಯೂಷನ್ ಪಾಸ್ ಮಾಡಲು ಮುಂದಾಗಿದೆ. ಇದರಲ್ಲಿ ಚೀನಾ ಇತಿಹಾಸದಲ್ಲಿ ಜಿನ್ಪಿಂಗ್ ಅವರಿಗೆ ಮಾವೋಗೆ ಸರಿಸಮನಾದ ಸ್ಥಾನವನ್ನು ಕೊಡುವ ಸಾಧ್ಯತೆ ಇದೆ ಅಂತ ವರದಿಯಾಗುತ್ತಿದೆ. ಹಾಗೇನಾದರೂ ಆದರೆ, ಈಗಾಗಲೇ ಚೀನಾದಲ್ಲಿ ಪ್ರತಿಯೊಂದರ ಮೇಲೂ ತನ್ನ ಹಿಡಿತವನ್ನು ಸಾಧಿಸಿರುವ ಜಿನ್ಪಿಂಗ್, ಕಮ್ಯುನಿಸ್ಟ್ ಚೀನಾದ ಅತಿದೊಡ್ಡ ಸರ್ವಾಧಿಕಾರಿ ಆಗಲಿದ್ದಾರೆ. ಹಾಗೂ ಜಗತ್ತು ಇತ್ತೀಚಿಗೆ ಕಂಡ ಮೋಸ್ಟ್ ಪವರ್ಫುಲ್ ಸರ್ವಾಧಿಕಾರಿ ಆಗಲಿದ್ದಾರೆ. ಇದು ಜಗತ್ತಿಗೆ ಮಾತ್ರ ಕೆಟ್ಟ ಬೆಳವಣಿಗೆಯಲ್ಲ. ಚೀನಾದ ಪಾಲಿಗೂ ಇದು ಕೆಟ್ಟ ಬೆಳವಣಿಗೆ. ಯಾಕಂದ್ರೆ ಚೀನಾದ ಟೆಕ್ ಕಂಪನಿಗಳು, ರಿಯಲ್ ಎಸ್ಟೇಟ್ ಕಂಪನಿಗಳು ಸೇರಿದಂತೆ ಎಲ್ಲರನ್ನೂ ತನ್ನ ಕಿರು ಬೆರಳಿನಲ್ಲಿ ಕುಣಿಸಲು ಜಿನ್ಪಿಂಗ್ ಪ್ರಯತ್ನ ಪಡುತ್ತಿದ್ದಾರೆ. ವಿರೋಧಿಸುವವರನ್ನು ನಾನಾ ಕೇಸ್ ಹಾಕಿ ಅವರ ಜೀವನ ಕಷ್ಟ ಮಾಡಲಾಗುತ್ತಿದೆ. ಇದರ ಪರಿಣಾಮ ಇತ್ತೀಚಿಗೆ ವೇಗದ ಅಭಿವೃದ್ಧಿ ಕಂಡ ಚೀನಾದ ಆರ್ಥಿಕತೆಯಲ್ಲೂ ಸಣ್ಣ ಪ್ರಮಾಣದ ಸ್ಟ್ರೆಸ್ ಈಗ ಕಾಣೋಕೆ ಶುರುವಾಗಿದೆ.

-masthmagaa.com

Contact Us for Advertisement

Leave a Reply