ಗಗನಕ್ಕೇರಿದ ಟೊಮೆಟೊ ಬೆಲೆ, ಪಿಜ್ಜಾದಲ್ಲಿ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌!

masthmagaa.com:

ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಪರ್ಯಾಯ ಮಾರ್ಗವನ್ನ ಹುಡುಕಿಕೊಳ್ಳೋ ಪರಿಸ್ಥಿತಿ ಬಂದಿದೆ. ಉತ್ತರಾಖಂಡದಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 250 ರೂಪಾಯಿ ಆಗಿದ್ದು, ಜನರಿಗೆ ಶಾಕ್‌ ನೀಡಿದೆ. ಇನ್ನೊಂದ್‌ ಕಡೆ ರಾಜ್ಯದಲ್ಲೂ ಟೊಮೆಟೊ ಬೆಲೆ ಶತಕ ಬಾರಿಸಿದ್ದು, ಇಳಿಕೆಯಾಗೋ ಯಾವ ಲಕ್ಷಣನೂ ಕಂಡು ಬರ್ತಿಲ್ಲ. ಈಗ ಟೊಮೆಟೊ ಜೊತೆಗೆ ಕ್ಯಾರೆಟ್‌ ಹಾಗೂ ಬೀನ್ಸ್‌ ಕೂಡ 100 ರೂಪಾಯಿಗಿಂತ ಹೆಚ್ಚಾಗಿದೆ. ಇತ್ತ ಟೊಮೆಟೊ ಬೆಲೆ ಏರಿಕೆ ಬಹುರಾಷ್ಟ್ರೀಯ ಆಹಾರ ಮಳಿಗೆ ಮೆಕ್‌ಡೊನಾಲ್ಡ್ಸ್‌ಗೂ ತಟ್ಟಿದ್ದು, ಇನ್ಮೇಲೆ ಉತ್ತರ ಹಾಗು ಈಶಾನ್ಯ ಭಾರತದ ಸ್ಟೋರ್‌ಗಳಲ್ಲಿ ಪಿಜ್ಜಾ ಸೇರಿದಂತೆ ಯಾವುದೇ ಆಹಾರ ಉತ್ಪನ್ನಗಳಲ್ಲಿ ಟೊಮೆಟೊ ಬಳಸಲ್ಲ ಅಂತ ಹೇಳಿದೆ. ಮತ್ತೊಂದ್‌ ಕಡೆ ಬಹುತೇಕ ಹಣ್ಣುಗಳ ದರ ಕೂಡ ಹೆಚ್ಚಾಗಿದ್ದು, ಒಂದು ಕೆಜಿ ಸೇಬಿನ ಬೆಲೆ 250 ರಿಂದ 300 ರೂಪಾಯಿ ಆಗಿದೆ. ದಾಳಿಂಬೆ ಹಣ್ಣು 240 ರೂಪಾಯಿ ಇದ್ರೆ ಬಾಳೆಹಣ್ಣು ಕೆಜಿಗೆ 85 ರೂಪಾಯಿ ಆಗಿದೆ. ಇನ್ನು ಬೇಳೆಕಾಳುಗಳ ದರದಲ್ಲೂ ಭಾರಿ ಏರಿಕೆಯಾಗಿದ್ದು, 25 ರಿಂದ 30% ಹೆಚ್ಚಾಗುತ್ತಿದೆ. ತಿಂಗಳ ಹಿಂದೆ 120ರಿಂದ 130 ರೂಪಾಯಿಗೆ ಸಿಗ್ತಾಯಿದ್ದ ತೊಗರಿ ಬೇಳೆ ಈಗ 160 ರೂಪಾಯಿ ಆಗಿದೆ. ಅಂದ್ಹಾಗೆ ತರಕಾರಿಯಿಂದ ಹಿಡಿದು ದಿನಸಿವರೆಗೂ ಬೆಲೆ ಏರಿಕೆಯಾಗಿರೋದ್ರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇತ್ತ ದರ ಏರಿಕೆ ಬಗ್ಗೆ ಮಾತಾಡಿರೋ ಗ್ರಾಹಕರೊಬ್ರು, ತಿಂಗಳ ಹಿಂದೆ 300 ರೂಪಾಯಿ ತಂದ್ರೆ ಬ್ಯಾಗ್‌ ತುಂಬ ತರಕಾರಿ ಮನೆಗೆ ತಗೊಂಡ್‌ ಹೋಗ್ತಿದ್ದೆ. ಆದ್ರೆ ಈಗ ಅರ್ಧ ಬ್ಯಾಗ್‌ ಕೂಡ ತುಂಬ್ತಿಲ್ಲ. ಹೀಗಾಗಿ ಕ್ಯಾರೆಟ್‌, ಬೀನ್ಸ್‌ ಟೊಮೆಟೊಗಳ ಖರೀದಿಯನ್ನ ಕಡಿಮೆ ಮಾಡಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply