ಭಾರತದಲ್ಲಿ ಕೊರೋನಾ ದೃಢಪಟ್ಟ ಮೊದಲ ಮಹಿಳೆಗೆ ಮತ್ತೆ ಸೋಂಕು

masthmagaa.com:

ಭಾರತದಲ್ಲಿ ಮೊದಲ ಬಾರಿಗೆ ಕೊರೋನಾ ಕೇಸ್‌ ಪತ್ತೆಯಾಗಿದ್ದು ಕಳೆದ ವರ್ಷ ಜನವಬರಿ 30ರಂದು. ಕೊರೋನಾದ ತವರು ಚೀನಾದ ವುಹಾನ್​ನಿಂದ ಬಂದಿದ್ದ ಕೇರಳದ ತ್ರಿಶ್ಶೂರ್ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿನಿಯಲ್ಲಿ ಸೋಂಕು ದೃಢಪಟ್ಟಿತ್ತು. ಇದು ಭಾರತದ ಮೊದಲ ಅಧಿಕೃತ ಕೇಸ್​ ಆಗಿತ್ತು. ಇದೀಗ ಆ ಮಹಿಳೆಗೆ ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ. ಅಂದ್ರೆ ಒಂದೂವರೆ ವರ್ಷ ಬಳಿಕ ಅವರಿಗೆ ಸೋಂಕು ದೃಢಪಟ್ಟಂತಾಗಿದೆ. ಇವ್ರು ಇತ್ತೀಚೆಗಷ್ಟೇ ದೆಹಲಿಗೆ ಹೋಗ್ಬೇಕು ಅಂದುಕೊಂಡಿದ್ರು. ಈ ಹಿನ್ನೆಲೆ ಕೊರೋನಾ ಪರೀಕ್ಷೆ ಮಾಡ್ಸಿದ್ದಾರೆ. ಆ್ಯಂಟಿಜೆನ್​ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದ್ರೆ, ಆರ್‌ಟಿಪಿಸಿಆರ್‌ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದಿತ್ತು. ಹೀಗಾಗಿ ಇವರನ್ನ ಹೋಮ್‌ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಇವ್ರು ಇದುವರೆಗೆ ಕೊರೋನಾ ಲಸಿಕೆ ಹಾಕ್ಕೊಂಡಿರಲಿಲ್ಲ ಅಂತಾನೂ ಗೊತ್ತಾಗಿದೆ. ಆಲ್ರೆಡಿ ಕೊರೋನಾ ಬಂದು ಹೋದವರ ದೇಹದಲ್ಲಿ ಕೊರೋನಾ ವಿರುದ್ಧ ಆ್ಯಂಟಿಬಾಡೀಸ್​ ರೂಪುಗೊಂಡಿರುತ್ತೆ. ಆದ್ರೆ ಅದು ಎಷ್ಟು ಸಮಯದವರೆಗೆ ಇರುತ್ತೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧ್ಯಯನಗಳು ನಡೀತಿವೆ.

-masthmagaa.com

Contact Us for Advertisement

Leave a Reply