ದೇಶದ ನಂ.1 ದುಬಾರಿ ಸಿಟಿ ಮುಂಬೈ! ಬೆಂಗಳೂರಿಗೆ ಎಷ್ಟನೇ ಸ್ಥಾನ?

masthmagaa.com:

ಭಾರತದಲ್ಲಿ ವಲಸಿಗರಿಗೆ ಜೀವನ ನಡೆಸಲು ಮುಂಬೈ ದುಬಾರಿ ನಗರವಾಗಿದೆ ಅಂತ Mercer’s Cost of Living ವರದಿಯಲ್ಲಿ ಹೇಳಲಾಗಿದೆ. ನಂತರದ ಸ್ಥಾನದಲ್ಲಿ ದಿಲ್ಲಿ ಹಾಗೂ ಬೆಂಗಳೂರು ನಗರಗಳಿವೆ. 5 ಖಂಡಗಳ 227 ನಗರಗಳಲ್ಲಿ ಮರ್ಸರ್ಸ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆಯನ್ನ ನಡೆಸಿದೆ. ಅದರ ಪ್ರಕಾರ ಜಾಗತಿಕವಾಗಿ ಮುಂಬೈ 147ನೇ ಸ್ಥಾನದಲ್ಲಿದೆ. ನವದೆಹಲಿ 169 ನೇ ಸ್ಥಾನದಲ್ಲಿದ್ರೆ, ಬೆಂಗಳೂರು 189ನೇ ಸ್ಥಾನದಲ್ಲಿದೆ. ಈ ಸಮೀಕ್ಷೆಯಲ್ಲಿ ವಸತಿ, ಸಾರಿಗೆ, ಆಹಾರ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆ ಸೇರಿದಂತೆ ಪ್ರತಿ ಸ್ಥಳದಲ್ಲಿ 200 ಕ್ಕೂ ಹೆಚ್ಚು ವಸ್ತುಗಳ ವೆಚ್ಚವನ್ನ ಗಣನೆಗೆ ತೆಗೆದುಕೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply