ಬೈಡೆನ್, ಎಂಜೆಲಾ ಭೇಟಿ… ಚೀನಾ-ರಷ್ಯಾಗೆ ಉರಿ ಉರಿ!

masthmagaa.com:

ಡೊನಾಲ್ಡ್​ ಟ್ರಂಪ್ ಅವಧಿಯಲ್ಲಿ ಹಾಳಾಗಿದ್ದ ಅಮೆರಿಕ ಮತ್ತು ನ್ಯಾಟೋ ಫ್ರೆಂಡ್ಶಿಪ್ಪು ಬೈಡೆನ್ ಬರ್ತಿದ್ದಂತೆ ಮತ್ತೆ ಜಾಸ್ತಿಯಾಗ್ತಿದೆ. ತನ್ನ ಅಧಿಕಾರದ ಕೊನೆಯ ಹಂತದಲ್ಲಿರೋ ಜರ್ಮನ್ ಚಾನ್ಸಲರ್ ಎಂಜೆಲಾ ಮರ್ಕೆಲ್ ಅಮೆರಿಕಾಗೆ ಹೋಗಿದ್ದಾರೆ. ಇಲ್ಲಿ ಬೈಡೆನ್ ಮತ್ತು ಎಂಜೆಲಾ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಭೇಟಿಯಲ್ಲಿ ಪ್ರಮುಖವಾಗಿ ನ್ಯಾಟೋ ಬಲಪಡಿಸೋದ್ರ ಜೊತೆಗೆ ರಷ್ಯಾದ ಆಕ್ರಮಣಶೀಲತೆ ಮತ್ತು ಚೀನಾದ ಪ್ರಜಾಪ್ರಭುತ್ವವಿರೋಧಿ ಕೃತ್ಯಗಳ ವಿರುದ್ಧದ ಹೆಜ್ಜೆಗಳ ಕುರಿತು ಚರ್ಚಿಸಲಾಯ್ತು. ಅದೇ ರೀತಿ ನಾರ್ಡ್​​ ಸ್ಟ್ರೀಮ್ ಪೈಪ್​ಲೈನ್ ಬಗ್ಗೆ ಕೂಡಾ ಚರ್ಚಿಸಲಾಯ್ತು. ಇದು ರಷ್ಯಾದಿಂದ ಜರ್ಮನಿಗೆ ಗ್ಯಾಸ್ ಪೂರೈಸಲು ಬಾಲ್ಟಿಕ್ ಸಮುದ್ರದ ಅಡಿಯಲ್ಲಿ ನಿರ್ಮಿಸಲಾಗ್ತಿರೋ ಪೈಪ್​ಲೈನ್​.. 1100 ಕೋಟಿ ಡಾಲರ್ ವೆಚ್ಚದ ಯೋಜನೆ ಇದಾಗಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಇದ್ರ ನಿರ್ಮಾಣ ಕಾರ್ಯ ಕಂಪ್ಲೀಟ್ ಆಗಲಿದೆ. ರಷ್ಯಾ ಈಗಾಗಲೇ ವಿವಿಧ ಪೈಪ್​ಲೈನ್​ಗಳ ಮೂಲಕ ಯೂರೋಪಿನ ಹಲವು ದೇಶಗಳಿಗೆ ನೈಸರ್ಗಿಕ ಅನಿಲ ಪೂರೈಸ್ತಿದೆ. ಆದ್ರೆ ಈಗ ನಿರ್ಮಾಣವಾಗ್ತಿರೋ ನಾರ್ಡ್​ ಸ್ಟ್ರೀಮ್​ 2 ಪೈಪ್​ಲೈನ್​ನಿಂದ ನೈಸರ್ಗಿಕ ಅನಿಲದ ವಿಚಾರದಲ್ಲಿ ರಷ್ಯಾದ ಮೇಲಿನ ಯೂರೋಪಿಯನ್ ರಾಷ್ಟ್ರಗಳ ಅವಲಂಬನೆ ಜಾಸ್ತಿಯಾಗುತ್ತೆ. ಅಲ್ಲದೆ ಈ ಮೂಲಕ ರಷ್ಯಾ ತನ್ನ ಮಿತ್ರರಾಷ್ಟ್ರ ಯುಕ್ರೇನ್​ಗೂ ಹಾನಿ ಮಾಡ್ಬೋದು ಅನ್ನೋದು ಅಮೆರಿಕದ ಚಿಂತೆ. ಹೀಗಾಗಿ ಈ ಯೋಜನೆಯನ್ನೇ ರಷ್ಯಾ ಅಸ್ತ್ರದ ರೀತಿ ಬಳಸಿಕೊಳ್ಳಲ್ಲ ಅನ್ನೋದನ್ನ ಖಾತ್ರಿಪಡಿಸಿಕೊಳ್ಳಬೇಕು ಅಂತ ಬೈಡೆನ್ ಎಂಜೆಲಾ ಮರ್ಕೆಲ್​​ಗೆ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply