ಬ್ರೆಜಿಲ್‌ vs ಅರ್ಜೆಂಟೀನಾ ವರ್ಲ್ಡ್‌ ಕಪ್‌ ಕ್ವಾಲಿಫರ್‌ ಮ್ಯಾಚ್‌: ಫೀಲ್ಡ್‌ನಿಂದ ಹೊರ ನಡೆದ ಮೆಸ್ಸಿ!

masthmagaa.com:

ಬ್ರೆಜಿಲ್‌ vs ಅರ್ಜಂಟೀನಾ ಫುಟ್‌ಬಾಲ್‌ ವರ್ಲ್ಡ್‌ ಕಪ್‌ ಕ್ವಾಲಿಫರ್‌ ಮ್ಯಾಚ್‌ ನಲ್ಲಿ ಫ್ಯಾನ್ಸ್‌ಗಳ ನಡುವೆ ಮಾರಾಮಾರಿ ಉಂಟಾಗಿ ಪಂದ್ಯ ಪ್ರಾರಂಭಕ್ಕೆ 30 ನಿಮಿಷಗಳ ಕಾಲ ಡಿಲೇ ಆಗಿದೆ. ಈ ಮ್ಯಾಚ್‌ ಶುರುವಾಗೋ ಸಂದರ್ಭದಲ್ಲಿ ಬ್ರೆಜಿಲ್‌ ಮತ್ತು ಅರ್ಜೆಂಟೀನಾ ಫ್ಯಾನ್ಸ್‌ಗಳ ನಡುವೆ ಸ್ಥಳದಲ್ಲೇ ಹೊಡೆದಾಟ ಪ್ರಾರಂಭವಾಗಿತ್ತು. ಈ ಕಿತ್ತಾಟದ ವೀಡಿಯೋ ಕಂಡು ಫುಟ್‌ಬಾಲ್‌ ಆಟಗಾರರೇ ಶಾಕ್‌ ಆಗಿದ್ದಾರೆ. ನಂತರ ಈ ಗಲಾಟೆ ಜೋರಾದ ಕಾರಣ, ಪೊಲೀಸ್‌ ಲಾಠಿ ಚಾರ್ಜ್‌ ಮಾಡಿದ್ದು, ಅರ್ಜಂಟೀನಾ ಫ್ಯಾನ್ಸ್‌ಗೆ ಥಳಿಸಿದ್ದಾರೆ. ಇದನ್ನ ವಿರೋಧಿಸಿ ಮೆಸ್ಸಿ ಹಾಗೂ ಅವರ ಟೀಮ್‌ ಪಿಚ್‌ನಿಂದ ಹೊರ ನಡೆದಿದ್ದಾರೆ. ಫೀಲ್ಡ್‌ ಬಿಟ್ಟು ಹೊರ ನಡೆಯೋವಾಗ, ನಾವು ಆಟವಾಡೋದಿಲ್ಲ, ನಾವು ಹೋಗ್ತೇವೆ ಅಂತ ಮೆಸ್ಸಿ ಹೇಳಿದ ಹಾಗೆ ಇತ್ತು ಎನ್ನಲಾಗಿದೆ. ಆದ್ರೆ ಸ್ವಲ್ಪ ಹೊತ್ತಲ್ಲೇ ಅರ್ಜಂಟೀನಾ ಆಟಗಾರರು ಫುಟ್‌ಬಾಲ್‌ ಫೀಲ್ಡ್‌ಗೆ ವಾಪಾಸ್ಸಾಗಿದ್ದು, ಫುಟ್‌ಬಾಲ್‌ ಮ್ಯಾಚ್‌ ಶುರುವಾಗಿದೆ. ಅಂದ್ಹಾಗೆ ಈ ಮ್ಯಾಚ್‌ ಬ್ರೆಜಿಲ್‌ನ ಮರಕಾನ ಸ್ಟೇಡಿಯಂನಲ್ಲಿ ನಡೆದಿದೆ.

-masthmagaa.com

Contact Us for Advertisement

Leave a Reply