ಏಷ್ಯಾ-ಪೆಸಿಫಿಕ್‌ನಲ್ಲಿ ಗೊಂದಲಗಳನ್ನ ವಿರೋಧಿಸಿ: ವಿಯೆಟ್ನಾಂಗೆ ಜಿನ್‌ಪಿಂಗ್‌ ಉಪದೇಶ

masthmagaa.com:

ಚೀನಾ ಅಧ್ಯಕ್ಷ 6 ವರ್ಷಗಳ ನಂತರ ಆಸಿಯಾನ್‌ ರಾಷ್ಟ್ರ ವಿಯೆಟ್ನಾಂಗೆ ಭೇಟಿ ನೀಡಿದ್ದಾರೆ. ಈ ವೇಳೆ ಏಷ್ಯಾ-ಪೆಸಿಫಿಕ್‌ ಪ್ರದೇಶದಲ್ಲಿ ಗೊಂದಲ ಸೃಷ್ಟಿ ಮಾಡೋ ಪ್ರಯತ್ನಗಳನ್ನ ವಿರೋಧಿಸಿ ಅಂತ ವಿಯೆಟ್ನಾಂಗೆ ಉಪದೇಶ ನೀಡಿದ್ದಾರೆ. ಅಂದ್ರೆ ಇಂಡೈರೆಕ್ಟ್‌ ಆಗಿ ಈ ಭಾಗದಲ್ಲಿನ ಅಮೆರಿಕ ಪ್ರಭಾವವನ್ನ ಜಿನ್‌ಪಿಂಗ್‌ ವಿರೋಧಿಸಿದ್ದಾರೆ. ಕಾರಣ ಏನಪ್ಪ ಅಂದ್ರೆ ರಿಸೆಂಟಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ವಿಯೆಟ್ನಾಂಗೆ ಭೇಟಿ ನೀಡಿ, ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಗಳನ್ನ ಅಪ್‌ಗ್ರೇಡ್‌ ಮಾಡೋ ಪ್ರಯತ್ನ ಮಾಡಿದ್ರು. ಈ ಬೆನ್ನಲ್ಲೇ ಎಲ್ಲಿ ವಿಯೆಟ್ನಾಂ ನಮ್ಮ ಕೈ ತಪ್ಪುತ್ತೋ ಅಂತ ಗುಡು ಗುಡು ಅಂತ ಓಡಿ ಬಂದಿರೋ ಜಿನ್‌ಪಿಂಗ್‌, ಹಲವು ಸಹಕಾರಗಳ ಪ್ಯಾಕೇಜನ್ನೇ ಹೊತ್ಕೊಂಡ್‌ ಬಂದಿದ್ದಾರೆ. ಚೀನಾ-ವಿಯೆಟ್ನಾಂಗೆ ರೈಲು ಮಾರ್ಗ ಸೇರಿದಂತೆ 30ಕ್ಕೂ ಹೆಚ್ಚು ಒಪ್ಪಂದಗಳನ್ನ ಮಾಡ್ಕೊಂದು ವಿಯೆಟ್ನಾಮನ್ನ ತನ್ನ ಕಂಕುಳಲ್ಲಿ ಹೊತ್ಕೊಂಡು ತಿರುಗಾಡೋಕೆ ಜಿನ್‌ಪಿಂಗ್ ಸ್ಕೆಚ್‌ ಹಾಕಿದ್ದಾರೆ. ಈ ಬಗ್ಗೆ ವಿಯೆಟ್ನಾಂ ಪ್ರಧಾನಿ ಪಾಮ್‌ ಮಿನ್‌ ಚಿನ್‌ ಮಾತನಾಡಿ, ʻಅಂತರಾಷ್ಟ್ರೀಯ ಸಮುದಾಯಕ್ಕೆ ಕೊಡುಗೆ ನೀಡೊ ಮೇಜರ್‌ ಕಂಟ್ರಿಯಾಗಿ ಚೀನಾ ಬೆಳೆಯೋದಕ್ಕೆ ನಮ್ಮ ಸಪೋರ್ಟ್‌ ಇದೆ. ಕೊಮ್ರೇಡ್‌ ಅಂದ್ರೆ ಒಡನಾಡಿ ಷಿ ಜಿನ್‌ಪಿಂಗ್‌ ಶಾಂತಿ, ಸಹಕಾರ ಹಾಗೂ ಜಾಗತೀಕ ಅಭಿವೃದ್ಧಿಗಾಗಿ ಕೆಲಸ ಮಾಡ್ತಾರೆʼ ಅಂತ ಹೊಗಳಿ ಅಟ್ಟಕ್ಕೇರಿಸಿದ್ದಾರೆ.

-masthmagaa.com

Contact Us for Advertisement

Leave a Reply