ವಿಶ್ವಶಾಂತಿಗೆ ಮೋದಿ ಸೇರಿದಂತೆ ಮೂರು ಜನರನ್ನ ಒಳಗೊಂಡ ಆಯೋಗ ರಚಿಸಬೇಕು: ಮೆಕ್ಸಿಕೋ ಅಧ್ಯಕ್ಷ

masthmagaa.com:

5 ವರ್ಷಗಳ ಅವಧಿವರೆಗೆ ವಿಶ್ವದಾದ್ಯಂತ ಕದನ ವಿರಾಮವನ್ನ ಘೋಷಿಸೋಕೆ ಮೆಕ್ಸಕೊದ ಅಧ್ಯಕ್ಷ ಆಂಡ್ರೀಸ್‌ ಮ್ಯಾನುವಲ್‌ ಲೋಪೆಜ್‌ ಓಬ್ರಡಾರ್‌ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. ಅದ್ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ಮೂವರು ನಾಯಕರನ್ನ ಒಳಗೊಂಡ ಒಂದು ಆಯೋಗ ರಚಿಸೋಕೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮಾತಾಡಿದ ಓಬ್ರಡಾರ್‌, ನಾನು ನಮ್ಮ ಈ ಪ್ರಸ್ತಾವನೆಯನ್ನ ಲಿಖಿತ ರೂಪದಲ್ಲಿ ಯುಎನ್‌ನಲ್ಲಿ ಪ್ರೆಸೆಂಟ್‌ ಮಾಡಿದ್ದೀನಿ. ಈ ವಿಷಯವನ್ನ ಸ್ಪ್ರೆಡ್‌ ಮಾಡೋಕೆ ಮೀಡಿಯಾ ಸಹಾಯ ಮಾಡುತ್ತೆ ಅಂತ ಅನ್ಕೊಂಡಿದಿನಿ ಅಂತ ಹೇಳಿದ್ದಾರೆ. ಇನ್ನು ತ್ರಿಸದಸ್ಯರಿರೋ ಈ ಆಯೋಗದಲ್ಲಿ, ಪೋಪ್‌ ಫ್ರಾನ್ಸಿಸ್‌, ಯುಎನ್‌ ಸೆಕ್ರಟರಿ ಜನರಲ್‌ ಅಂಟಾನಿಯೋ ಗುಟೆರೆಸ್‌ ಮತ್ತು ಮೋದಿಯವ್ರು ಇರ್ಬೇಕು ಅಂತ ಶಿಫಾರಸ್ಸು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply