ಕೊರೋನಾದಿಂದ ಮೃತಪಟ್ಟವರ ಅಸಲಿ ಲೆಕ್ಕವೇ ಬೇರೆ!

masthmagaa.com:

ಕೊರೋನಾದಿಂದ ಮೃತಪಟ್ಟವರ ಬಗ್ಗೆ ಜಗತ್ತಿನ ವಿವಿಧ ದೇಶಗಳ ಬಳಿ ಇರೋ ಅಂಕಿಅಂಶಗಳಿಗಿಂತ ಹೆಚ್ಚಿನ ಸಂಖ್ಯೆಯ ಜನ ಕೊರೋನಾಗೆ ಬಲಿಯಾಗಿರಬಹುದು ಅನ್ನೋ ಅನುಮಾನ ಹೆಚ್ಚಾಗಿದೆ. ಇದಕ್ಕೆ ಕಾರಣ ಮೆಕ್ಸಿಕೋ ಆರೋಗ್ಯ ಇಲಾಖೆ ಹೊಸದಾಗಿ ಬಿಡುಗಡೆ ಮಾಡಿರೋ ಅಂಕಿಅಂಶ. ಇದರ ಪ್ರಕಾರ ಮೆಕ್ಸಿಕೋದಲ್ಲಿ ಈಗ ಅಂದುಕೊಂಡಿದ್ದಕ್ಕಿಂತಲೂ 60 ಪರ್ಸೆಂಟ್​ ಹೆಚ್ಚು ಜನ ಕೊರೋನಾದಿಂದ ಮೃತಪಟ್ಟಿರಬಹುದು ಅನ್ನೋರೀತಿ ಇದೆ. ಯಾಕಂದ್ರೆ ಹೊಸದಾಗಿ ಬಿಡುಗಡೆಯಾದ ಅಂಕಿಅಂಶದ ಪ್ರಕಾರ ಮೆಕ್ಸಿಕೋದಲ್ಲಿ ಮೇ 23ರವರೆಗೆ 3.51 ಲಕ್ಷ ಜನ ಕೊರೋನಾದಿಂದ ಮೃತಪಟ್ಟಿದ್ದರು ಅಂತ ಹೇಳಲಾಗಿದೆ. ಆದ್ರೆ ಮೆಕ್ಸಿಕೋದಲ್ಲಿ ಈಗ ಸಾವಿನ್ನಪ್ಪಿದವರ ಸಂಖ್ಯೆ ತಗೊಂಡ್ರೂ ಅಷ್ಟು ದಾಟಿಲ್ಲ. ಮೇ 23ರವರೆಗೆ 2.21 ಲಕ್ಷ ಸಾವು ವರದಿಯಾಗಿತ್ತು. ಆದ್ರೀಗ ಆರೋಗ್ಯ ಇಲಾಖೆಗೆ ಸಿಕ್ಕ ಸಾವಿನ ಪ್ರಮಾಣಪತ್ರಗಳನ್ನ ನೋಡಿದ್ರೆ ಆ ಸಂಖ್ಯೆ ಆಲ್ರೆಡಿ ಮೂರೂವರೆ ಲಕ್ಷ ದಾಟಿದೆ ಅಂತ ತೋರಿಸ್ತಿದೆ.

-masthmagaa.com

Contact Us for Advertisement

Leave a Reply