ಭಾರತದ ಚುನಾವಣೆ ವಿರುದ್ಧ ಚೀನಾ ಸೈಬರ್‌ ಆಯುಧ: ಮೈಕ್ರೊಸಾಫ್ಟ್

masthmagaa.com:

ಭಾರತದ ಚುನಾವಣಾ ಟೈಮಲ್ಲೆ ಅಮೆರಿಕದ ಟೆಕ್‌ ದಿಗ್ಗಜ ಕಂಪನಿ ಮೈಕ್ರೊಸಾಫ್ಟ್‌ ಚೀನಾ ಮೇಲೆ ದೊಡ್ಡ ಆರೋಪ ಮಾಡಿದೆ. ಭಾರತ, ಅಮೆರಿಕ ಹಾಗೂ ದಕ್ಷಿಣ ಕೊರಿಯಾಗಳ ಚುನಾವಣೆಗೆ ಅಡ್ಡಿಪಡಿಸೋ ಪ್ರಯತ್ನಕ್ಕೆ ಚೀನಾ AI ಬಳಸಲಿದೆ ಅಂತ ಸಂಸ್ಥೆ ಆರೋಪಿಸಿದೆ. ಉತ್ತರ ಕೊರಿಯಾದ ಸೈಬರ್‌ ಹ್ಯಾಕರ್‌ಗಳು ಹಾಗೂ ಚೀನಾದ ಸೈಬರ್‌ ಹ್ಯಾಕರ್‌ಗಳು ಸೇರಿ ಈ ಕೆಲಸ ಮಾಡಲಿದ್ದಾರೆ. AI ಸಹಾಯದಿಂದ ತಯಾರಿಸೋ ಕಂಟೆಂಟ್‌ನ್ನ ತನಗೆ ಬಳಕೆಯಾಗೋ ರೀತಿಯಲ್ಲಿ, ಪ್ರಭಾವ ಬೀರೋಕೆ ಈ ದೇಶಗಳಲ್ಲಿ ಚೀನಾ ಹರಿಬಿಡಲಿದೆ ಅಂತ ಕಂಪನಿ ಹೇಳಿದೆ. ತೈವಾನ್‌ ಮೇಲೂ ಚೀನಾ ಇದೇ ಆಯುಧ ಪ್ರಯೋಗ ಮಾಡಿತ್ತು ಆದ್ರೆ ಅದ್ರಿಂದ ಅಲ್ಲಿ ಯಾವ ಬದಲಾವಣೆನೂ ಆಗ್ಲಿಲ್ಲ. ಈಗ ಇದೇ ಪ್ರಯತ್ನವನ್ನ ಭಾರತ, ಕೊರಿಯಾ ಹಾಗೂ ಅಮೆರಿಕ ಮೇಲೆ ಮಾಡಲಿದೆ ಅಂತ ಮೈಕ್ರೊಸಾಫ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply