ಅಮೆರಿಕದಲ್ಲಿ ಲಸಿಕೆ 2ನೇ ಡೋಸ್‘ ಹಾಕಿಸಿಕೊಳ್ಳಲು ಜನ ಹಿಂದೇಟು!

masthmagaa.com:

ಅಮೆರಿಕದಲ್ಲಿ ಲಕ್ಷಾಂತರ ಮಂದಿ ಕೊರೋನಾ ಲಸಿಕೆಯ 2ನೇ ಡೋಸ್ ಹಾಕಿಸಿಕೊಳ್ತಿಲ್ಲ. ಸಿಡಿಸಿ ಅಂದ್ರೆ ಸೆಂಟರ್ಸ್ ಫರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಶನ್ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೇ ಮಾಡೆರ್ನಾ ಮತ್ತು ಫೈಜರ್ ಲಸಿಕೆ ಹಾಕಿಸಿಕೊಂಡವರ ಪೈಕಿ 50 ಲಕ್ಷಕ್ಕೂ ಅಧಿಕ ಜನ 2ನೇ ಡೋಸ್​​ ಹಾಕಿಸಿಕೊಂಡಿಲ್ಲ.. ದಿನೇ ದಿನೇ ಇಂಥವರ ಸಂಖ್ಯೆ ಜಾಸ್ತಿಯಾಗುತ್ತಿದೆ ಅಂತ ಮಾಹಿತಿ ನೀಡಿದೆ. ಕೆಲವರು ಮೊದಲ ಡೋಸ್ ಹಾಕಿಸಿಕೊಂಡ ಬಳಿಕ ಜ್ವರ, ಮೈಕೈ ನೋವಿನಂತ ಲಕ್ಷಣಗಳು ಕಂಡು ಬಂದಿದ್ದಕ್ಕೆ ಹೆದರಿಕೊಂಡಿದ್ದಾರೆ. ಇನ್ನು ಕೆಲವರು ಕೊರೋನಾ ವಿರುದ್ಧ ಹೋರಾಟಕ್ಕೆ ಒಂದೇ ಡೋಸ್ ಸಾಕು ಅಂತ ಭಾವಿಸ್ತಿದ್ದಾರೆ ಹೀಗಾಗಿ ಲಸಿಕೆ ಹಾಕಿಸಿಕೊಳ್ತಿಲ್ಲ.. ಇನ್ನು ಕೆಲವರು ಲಸಿಕೆ ಹಾಕಿಸಿಕೊಳ್ಳಲು ರೆಡಿ ಇದ್ರೂ ಲಸಿಕೆ ಕೇಂದ್ರದಲ್ಲಿ ಸ್ಟಾಕ್ ಇಲ್ಲದೆಯೋ ಅಥವಾ ಮೊದಲ ಡೋಸ್ ಹಾಕಿಸಿಕೊಂಡಿದ್ರಲ್ವಾ ಆ ಬ್ರಾಂಡ್​​ನ ಲಸಿಕೆ ಇಲ್ಲ ಅಂತಲೋ 2ನೇ ಡೋಸ್​​ ಲಸಿಕೆಯಿಂದ ವಂಚಿತರಾಗಿದ್ದಾರೆ.

Contact Us for Advertisement

Leave a Reply