ಅಭಿಜಿತ್ ಪರವಾಗಿ ನಿಂತು ಬಿಜೆಪಿಗೆ ರಾಹುಲ್ ಡಿಚ್ಚಿ..!

ದೆಹಲಿ: ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಪರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ಯಾಟ್ ಬೀಸಿದ್ದಾರೆ. ಭಾರತದ ಆರ್ಥಿಕತೆ ಕಷ್ಟದಲ್ಲಿದೆ ಎಂದಿದ್ದ ಅಭಿಜಿತ್ ಬ್ಯಾನರ್ಜಿ ಓರ್ವ ಎಡಪಂಥೀಯ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು. ಆದ್ರೆ ಪಿಯೂಷ್ ತಮ್ಮ ವೃತ್ತಿಪರತೆ ಬಗ್ಗೆ ಮಾತನಾಡಿದ್ದಾರೆ ಎಂದು ಅಭಿಜಿತ್ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಅಭಿಜಿತ್ ಬೆನ್ನಿಗೆ  ನಿಂತ ರಾಹುಲ್ ಗಾಂಧಿ, ನಿಮ್ಮ ಬಗ್ಗೆ ಲಕ್ಷಾಂತರ ಭಾರತೀಯರಿಗೆ ಹೆಮ್ಮೆಯಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರೀತಿಯ ಬ್ಯಾನರ್ಜಿಯವರೇ, ಇಂತಹ ಧರ್ಮಾಂಧರು ದ್ವೇಷಭಾವನೆಗಳಿಂದ ಕುರುಡರಾಗಿದ್ದಾರೆ. ಅಂತವರಿಗೆ ವೃತ್ತಿಪರತೆ ಅಂದ್ರೆ ಏನು ಅನ್ನೋದೇ ಗೊತ್ತಿಲ್ಲ. ನೀವು ದಶಕದವರೆಗೆ ಪ್ರಯತ್ನಿಸಿದರೂ ಕೂಡ ಅವರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ, ಲಕ್ಷಾಂತರ ಭಾರತೀಯರಿಗೆ ನಿಮ್ಮ ಕೆಲಸದ ಮೇಲೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

Contact Us for Advertisement

Leave a Reply