ಹೆಣ್ಮಕ್ಕಳ ಮದುವೆ ಏಜ್ 18ರಿಂದ 21ಕ್ಕೆ ಏರಿಕೆಯಾಗುತ್ತಾ?

masthmagaa.com:
ಹೆಣ್ಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 21 ವರ್ಷಕ್ಕೆ ಏರಿಸೋ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟದಲ್ಲಿ ಪಾಸ್ ಮಾಡಲಾಗಿದೆ. ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಮಾತಾಡಿದ್ದ ಪ್ರಧಾನಿ ಮೋದಿ, ಈ ಬಗ್ಗೆ ಚಿಂತನೆ ನಡೆಸ್ತಿದ್ದೀವಿ ಅಂತ ಹೇಳಿದ್ರು. ಇದ್ರ ಬೆನ್ನಲ್ಲೇ ಜೂನ್ ತಿಂಗಳಲ್ಲಿ ಜಯಾ ಜೇಟ್ಲಿ ನೇತೃತ್ವದಲ್ಲಿ ನೀತಿ ಆಯೋಗದ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ತಾಯ್ತನದ ವಯಸ್ಸು, ತಾಯಿಯ ಮರಣ ಪ್ರಮಾಣ ಕಡಿಮೆ ಮಾಡೋ ಅಗತ್ಯತೆ, ಪೌಷ್ಠಿಕಾಂಶಮಟ್ಟ ಸುಧಾರಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಶೀಲಸಲು ಸೂಚಿಸಲಾಗಿತ್ತು. ಈ ಟಾಸ್ಕ್​ ಫೋರ್ಸ್​​​​ ಶಿಫಾರಿನಂತೆ ಪ್ರಸ್ತಾವನೆ ಪಾಸ್ ಆಗಿದ್ದು, ಹೊಸ ರೂಲ್ಸ್ ಜಾರಿಗೆ Prohibition of Child Marriage Act, Special Marriage Act, and the Hindu Marriage Actನಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತರೋ ಸಾಧ್ಯತೆ ಇದೆ.
-masthmagaa.com

Contact Us for Advertisement

Leave a Reply