BIG NEWS: ನೂತನ ಕೃಷಿ ಕಾನೂನುಗಳನ್ನ ವಾಪಸ್ ಪಡೆಯಲ್ಲ ಎಂದ ಕೇಂದ್ರ!

masthmagaa.com:

ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಳಿಸಿದ್ದ ಲಿಖಿತ ಪ್ರಸ್ತಾವನೆಯನ್ನು ರೈತ ಮುಖಂಡರು ತಿರಸ್ಕರಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ತನ್ನ ನಿಲುವನ್ನ ಇವತ್ತು ಸ್ಪಷ್ಟಪಡಿಸಿದೆ. ನೂತನ ಕಾಯ್ದೆಗಳನ್ನ ವಾಪಸ್ ಪಡೆಯಲ್ಲ, ಕಾಯ್ದೆಗಳಲ್ಲಿ ಏನಾದ್ರೂ ಬದಲಾವಣೆ ಮಾಡಬೇಕೋ ಅಂತ ರೈತರು ಹೇಳಿದ್ರೆ ಅದನ್ನ ಮಾಡ್ತೀವಿ. ರೈತರು ಚರ್ಚೆಗೆ ಕರೆದಾಗ ನಾವು ಬರಲು ಸಿದ್ಧರಿದ್ದೀವಿ ಅಂತ ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ಇವತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ನರೇಂದ್ರ ಸಿಂಗ್ ತೋಮರ್, ‘MSP ಮುಂದುವರಿಯುತ್ತೆ. APMC ಮಾರುಕಟ್ಟೆಗಳು ಕೂಡ ಇರುತ್ತವೆ. ಹೊಸದಾಗಿ ತೆರೆಯುವ ಖಾಸಗಿ ಮಂಡಿಗಳಿಗೂ APMCಯಷ್ಟೇ ತೆರಿಗೆ ಹಾಕಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಲಾಗಿದೆ. ರೈತರು ತಮ್ಮ ಉತ್ಪನ್ನವನ್ನ APMCಯಲ್ಲೂ ಮಾರಾಟ ಮಾಡಬಹುದು ಅಥವಾ ಖಾಸಗಿ ಮಂಡಿಗಳಲ್ಲೂ ಮಾರಾಟ ಮಾಡಬಹುದು. ಈ ಸಂಬಂಧ ರೈತ ಮುಖಂಡರಿಗೆ ಪ್ರಸ್ತಾವನೆಯನ್ನ ಕಳಿಸಿದ್ದೇವೆ. ಅವರು ನೂತನ ಕಾನೂನುಗಳನ್ನೇ ವಾಪಸ್ ಪಡೆಯಬೇಕು ಅಂತಿದ್ದಾರೆ. ಆದ್ರೆ ಯಾವುದೇ ಕಾನೂನು ಸಂಪೂರ್ಣವಾಗಿ ದೋಷಪೂರಿತವಾಗಿರಲು ಸಾಧ್ಯವಿಲ್ಲ. ಹೀಗಾಗಿ ರೈತರಿಗೆ ತೊಂದರೆಯಾಗುವ ಅಂಶಗಳಿದ್ರೆ ನಾವು ಅದರ ಬಗ್ಗೆ ಚರ್ಚಿಸಲು ಸಿದ್ದರಿದ್ದೇವೆ. ಹೀಗಾಗಿ ರೈತ ಸಂಘಟನೆಗಳು  ಪ್ರತಿಭಟನೆಯನ್ನ ಕೈಬಿಡಬೇಕು ಅಂತ ಮನವಿ ಮಾಡುತ್ತೇವೆ’ ಅಂತ ಹೇಳಿದ್ರು.

masthmagaa.com

Contact Us for Advertisement

Leave a Reply