ಜನಸಂಖ್ಯೆಯಲ್ಲಿ ಚೀನಾವನ್ನ ಹಿಂದಿಕ್ಕಿದ ಭಾರತ, ಜರ್ಮನಿ ಕಾರ್ಟೂನ್‌ನಲ್ಲಿ ಭಾರತಕ್ಕೆ ಅವಮಾನ!

masthmagaa.com:

ಜನಸಂಖ್ಯೆಯಲ್ಲಿ ಚೀನಾವನ್ನ ಹಿಂದಿಕ್ಕುತ್ತಿರುವ ಭಾರತವನ್ನ ಜರ್ಮನಿ ಮ್ಯಾಗಜೀನ್‌ ಒಂದು ವ್ಯಂಗ್ಯ ಮಾಡಿದೆ. ಜರ್ಮನಿಯ Der spiegel ಅನ್ನೊ ಮ್ಯಾಗಜಿನ್‌ ಒಂದ್ರಲ್ಲಿ ಬಂದಿರುವ ಕಾರ್ಟೂನ್‌ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕಾರ್ಟೂನ್‌ನಲ್ಲಿ ಚೀನಿಯರು ಬುಲೆಟ್‌ ಟ್ರೈನ್‌ನಲ್ಲಿ ಹೋಗ್ತಿದ್ರೆ, ಅದರ ಪಕ್ಕದಲ್ಲಿ ಭಾರತೀಯರು ಹಳೆ ಟ್ರೈನ್‌ನ ಮೇಲೆ ಕುಳಿತು ಚೀನಾವನ್ನ ಹಿಂದಿಕ್ಕುತ್ತಿರುವಂತೆ ವ್ಯಂಗ್ಯ ಚಿತ್ರ ಬಿಡಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹೆಗಾರ ಕಾಂಚನ್‌ ಗುಪ್ತಾ, ಇದು ಜನಾಂಗೀಯ ನಿಂದನೆಯ ಅತಿರೇಕವನ್ನ ತೋರಿಸುತ್ತಿದೆ. ವಾಸ್ತವವನ್ನ ತಿರುಚಿ ಚೀನಾವನ್ನ ಮೇಲ್ಮಟ್ಟದಲ್ಲಿ ತೋರಿಸುವುದು ಭಾರತಕ್ಕೆ ಅವಮಾನ ಮಾಡಿದಂತೆ. ಭಾರತ ಮಂಗಳಯಾನ ಕೈಗೊಂಡ ದೇಶ ಅನ್ನೋದು ನೆನಪಿರಲಿ ಅಂತ ತಿರುಗೇಟು ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply