ಅತ್ಯಾಚಾರಕ್ಕೊಳಗಾದ ಬಾಲಕಿಗೆ ಥಳಿತ, ಆರೋಪಿ ಜೊತೆ ಮೆರವಣಿಗೆ!

masthmagaa.com:

ಭಾರತದ ಕೆಲವೊಂದು ರಾಜ್ಯಗಳಲ್ಲಿ ನಡೆಯೋ ಘಟನೆಗಳು ನಮ್ಮ ಸಮಾಜ ಎತ್ತ ಸಾಗ್ತಾ ಇದೆ ಅನ್ನೋ ಪ್ರಶ್ನೆ ಮುಡಿಸುತ್ತೆ.. ಮಧ್ಯಪ್ರದೇಶದಲ್ಲಿ 21 ವರ್ಷದ ಹುಡುಗನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿಚಾರ ತಿಳಿದ ಬಳಿಕ ಬಾಲಕಿಯ ತಂದೆ ತಾಯಿ ಸೇರಿದಂತೆ ಇಡೀ ಗ್ರಾಮದ ಜನ ಒಟ್ಟಾಗಿ ಇಬ್ಬರಿಗೂ ಥಳಿಸಿ, ಮೆರವಣಿಗೆ ಮಾಡಿಸಿದ್ದಾರೆ. ಆ ಯುವಕನಿಗೆ ಥಳಿಸಿದ್ರಲ್ಲಿ ತಪ್ಪೇನಿಲ್ಲ ಅಂತ ಹೇಳ್ಬೋದು. ಆದ್ರೆ ಆ ಬಾಲಕಿಗೂ ಥಳಿಸಿ, ಮೆರವಣಿಗೆ ಮಾಡಿಸಲಾಗಿದೆ. ಈ ಸಮಯದಲ್ಲಿ ಸುತ್ತ ಇದ್ದವರೆಲ್ಲರೂ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಬೇರೆ ಕೂಗಿದ್ದಾರೆ. ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗೋದೇನೂ ತಪ್ಪಲ್ಲ.. ಆದ್ರೆ ಅವರು ಯಾವ ಘನಕಾರ್ಯ ಮಾಡಿದ್ದಾರೆ ಅಂತ ಈ ಘೋಷಣೆ ಕೂಗಿದ್ರೋ ಗೊತ್ತಿಲ್ಲ.. ಒಟ್ನಲ್ಲಿ ವಿಚಾರ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ರಕ್ಷಿಸಿ, ಆರೋಪಿ ಯುವಕ ಸೇರಿದಂತೆ 6 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply