ಹಾವೇರಿ: ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಪ್ರಾರಂಭಿಸಿದ ʻಕೈʼ ಶಾಸಕ

masthmagaa.com:

ರಾಜ್ಯದಲ್ಲಿ ಮಳೆ ಕೊರತೆಯುಂಟಾಗಿದ್ದು, ಮಳೆಗಾಗಿ ಮೋಡ ಬಿತ್ತನೆ ಮಾಡುವ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಸಿಎಂ ಸಿದ್ದರಾಮಯ್ಯನವರು ಮೋಡ ಬಿತ್ತನೆ ಮಾಡುವ ಯೋಚನೆಯಿಲ್ಲ ಅಂತ ಹೇಳಿದ್ರು. ಇದರ ನಡುವೆಯೇ ರಾಣೆಬೆನ್ನೂರು ಶಾಸಕ ಪ್ರಕಾಶ್‌ ಕೋಳಿವಾಡ ತಮ್ಮ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಕೈ ಹಾಕಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ನಡೆಸೋದಾಗಿ ಕೋಳಿವಾಡ ಹೇಳಿದ್ದಾರೆ. ಮೋಡ ಬಿತ್ತನೆಗೆ ಸಿಎಂ ಸಿದ್ದರಾಮಯ್ಯನವರು ಅನುಮತಿ ಕೊಟ್ಟಿದ್ದಾರೆ. ಮೋಡ ಬಿತ್ತನೆಯಿಂದ ಶೇ.28ರಷ್ಟು ಮಳೆ ಆಗುತ್ತೆ ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದೇವೆ. ನಮ್ಮದೇ ಸ್ವಂತ ವಿಮಾನ ಇರುವುದರಿಂದ ಖರ್ಚು ಕಡಿಮೆ ಆಗುತ್ತೆ. 15ರಿಂದ 20 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮುಗಿಯಲಿದೆ ಅಂತ ಕೋಳಿವಾಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply