ಪಾಕ್​ ಸೇನೆಯನ್ನ ಟೀಕಿಸಿದ್ರೆ ಜೈಲು ಶಿಕ್ಷೆ ಜೊತೆಗೆ ಭಾರಿ ದಂಡ!

masthmagaa.com:

ಪಾಕ್​ ಸೇನೆ ವಿರುದ್ಧ ಮಾತನಾಡುವವರನ್ನ, ಸೇನೆ ಅಥವಾ ಸೇನೆಯ ಯಾವುದೇ ವ್ಯಕ್ತಿಯನ್ನ ಅಪಹಾಸ್ಯ ಮಾಡೋರನ್ನ ಶಿಕ್ಷಿಸುವ ಕಾನೂನು ಪಾಕಿಸ್ತಾನದಲ್ಲಿ ಜಾರಿಗೆ ಬರುವ ಲಕ್ಷಣ ಕಾಣ್ತಿದೆ. ಅಂದ್ಹಾಗೆ ಕ್ರಿಮಿನಲ್ ಲಾ ಅಮೆಂಡ್​ಮೆಂಟ್​ ಬಿಲ್​ 2020 ಅನ್ನ ಕಳೆದ ವರ್ಷ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಸ್ಟಾಂಡಿಂಗ್ ಕಮಿಷನ್ ಆನ್ ಇಂಟೀರಿಯರ್​ಗೆ ಕಳಿಸಿಕೊಡಲಾಗಿತ್ತು. ಇದೀಗ ಈ ಮಸೂದೆಯನ್ನ ನ್ಯಾಷನಲ್ ಅಸೆಂಬ್ಲಿಯ ಕೆಳಮನೆ ಪಾಸ್ ಮಾಡ್ಬೋದು ಅಂತ ಸ್ಟಾಂಡಿಂಗ್ ಕಮಿಷನ್ ಹೇಳಿದೆ.

ಈ ಕಾನೂನು ಏನಾದ್ರೂ ಜಾರಿಗೆ ಬಂದ್ರೆ ಸೇನೆ ಅಥವಾ ಅದರ ಯಾವುದೇ ಸದಸ್ಯರನ್ನ ಅಪಹಾಸ್ಯ ಮಾಡೋರನ್ನ 2 ವರ್ಷಗಳವರೆಗೆ ಜೈಲಿಗೆ ಕಳಿಸಬಹುದು. ಅಥವಾ 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು. ಆದ್ರೆ ಈ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಂದ್ಹಾಗೆ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಸಲಹಗಾರರಾಗಿರೋ ಪಾಕ್​ ಸೇನೆಯ ಮಾಜಿ ಮುಖ್ಯಸ್ಥ ಅಸಿಂ ಸಲೀಂ ಬಜ್ವಾ ಕೋಟಿ ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ ಅನ್ನೋ ಆರೋಪ ಕೇಳಿ ಬಂದ ಬೆನ್ನಲ್ಲೇ ಈ ಮಸೂದೆಗೆ ಗ್ರೀನ್ ಸಿಗ್ನಲ್​ ಕೂಡ ಸಿಕ್ಕಿರೋದು ಇಂಟರೆಸ್ಟಿಂಗ್.

-masthmagaa.com

 

Contact Us for Advertisement

Leave a Reply