ಅಮೆರಿಕಾದಲ್ಲಿ ಮೋದಿ ಸ್ವಚ್ಛತೆಯ ಮಂತ್ರ..!

ಭಾರತದಲ್ಲಿ ಸ್ವಚ್ಛ ಭಾರತ ಅಭಿಯಾನದ ಮೂಲಕ ಗಮನ ಸೆಳೆದ ಮೋದಿ ಈಗ ಅಮೆರಿಕಾದಲ್ಲೂ ಸ್ವಚ್ಛತೆಯಿಂದ ಸುದ್ದಿಯಾಗಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೋದಿ ಅಮೆರಿಕಾದ ಹ್ಯೂಸ್ಟನ್ ತೆರಳಿದ್ದಾರೆ. ಅವರನ್ನು ಸ್ವಾಗತಿಸುವಾಗ ಪ್ರತಿನಿಧಿಗಳು ಹೂಗಚ್ಛ ನೀಡಿದ್ರು. ಆದ್ರೆ ಈ ವೇಳೆ ಅದರಿಂದ ಸಣ್ಣದೊಂದು ಹಸಿರಿನ ಸೊಪ್ಪು ಕೆಳಗೆ ಬಿತ್ತು. ಇದನ್ನು ಗಮನಿಸಿದ ಪ್ರಧಾನಿ ಮೋದಿ ತಾವೇ ಅದನ್ನು ಎತ್ತಿ ಭದ್ರತಾ ಸಿಬ್ಬಂದಿ ಕೈಗೆ ಕೊಟ್ಟಿದ್ದಾರೆ. ಮೋದಿಯವರ ಸ್ವಚ್ಛತೆ ಬಗೆಗಿನ ಪ್ರೀತಿ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ಫೇಸ್ ಬುಕ್‍ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Contact Us for Advertisement

Leave a Reply