370ನೇ ವಿಧಿ ರದ್ದತಿ…ನಮೋಗೆ ಕಾಶ್ಮೀರಿ ಪಂಡಿತರ ಧನ್ಯವಾದ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಶ್ಮೀರಿ ಪಂಡಿತರು ಥ್ಯಾಂಕ್ಸ್ ಹೇಳಿದ್ದಾರೆ. ಪ್ರಧಾನಿ ಮೋದಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಮೆರಿಕಾದ ಹ್ಯೂಸ್ಟನ್ ತೆರಳಿದ್ದಾರೆ. ಅಲ್ಲಿ ಪ್ರಧಾನಿ ಮೋದಿ ಭೇಟಿಯಾದ ಪಂಡಿತರ ನಿಯೋಗ ಮಾತುಕತೆ ನಡೆಸಿತು. ಈ ವೇಳೆ ಸದಸ್ಯರೊಬ್ಬರು 7 ಲಕ್ಷ ಕಾಶ್ಮೀರಿ ಪಂಡಿತರ ಪರವಾಗಿ ನಿಮಗೆ ಧನ್ಯವಾದಗಳು ಅಂತ ಹೇಳಿದ್ರು. ಜೊತೆಗೆ ಕಾಶ್ಮೀರಿ ಪಂಡಿತರನ್ನು ವಾಪಸ್ ಕಳುಹಿಸಿ, ಆ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮುದಾಯದ ನಾಯಕರು, ತಜ್ಞರು, ಬಂಡವಾಳಗಾರರನ್ನು ಒಗ್ಗೂಡಿಸಲು ಗೃಹ ಸಚಿವಾಲಯದ ಅಧೀನದಲ್ಲಿ ಪಂಡಿತ ಸಮುದಾಯದ ಕಾರ್ಯಪಡೆ ರಚಿಸಬೇಕೆಂದು ನಿಯೋಗ ಮನವಿ ಸಲ್ಲಿಸಿತು.

ಇಂದು ರಾತ್ರಿ 8.30ಕ್ಕೆ ಹೌಡಿ ಮೋದಿ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿ ರಾತ್ರಿ 10 ಗಂಟೆಗೆ ಸುಮಾರು 50 ಸಾವಿರ ಮಂದಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Contact Us for Advertisement

Leave a Reply