ರಫೆಲ್‌ ಜೆಟ್ ಅಕ್ರಮ ವಿಚಾರಣೆಗೆ ಮೋದಿ ಸರ್ಕಾರ ಅಡ್ಡಗಾಲು?

masthmagaa.com:

2016ರ ರಫೆಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಹಗರಣದ ತನಿಖೆಗೆ ಮೋದಿ ಸರ್ಕಾರ ಸಹಕಾರ ನೀಡ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಭಾರತದಲ್ಲಿರೋ ಫ್ರೆಂಚ್‌ ರಾಯಭಾರಿ ಎಮಾನುಯಲ್‌ ಲೆನಾಯ್ನ್‌ ಹಾಗಂತ ಹೇಳಿಕೆ ನೀಡಿದ್ದಾರೆ. ʻಭಾರತದ ಅಧಿಕಾರಿಗಳು ಇನ್ವಾಲ್ವ್‌ ಆಗಿರೋ ತನಿಖೆಗಳು ಬಹಳ ಡಿಲೇ ಆಗ್ತಿವೆ. ಹಲವು ಬಾರಿ ಅಪೂರ್ಣ ವಿಧಾನಗಳಲ್ಲಿ ತನಿಖೆ ಮಾಡಲಾಗತ್ತೆ. ರಫೆಲ್‌ ಜೆಟ್‌ ಹಗರಣದ ತನಿಖೆಗೆ ಫೆಂಚ್‌ ನ್ಯಾಯಾಧೀಶರು ಭಾರತದ ಸಹಕಾರ ಕೋರಿದ್ದಾರೆ. ಆದ್ರೆ ಭಾರತ ಸಹಕಾರ ನೀಡಿಲ್ಲʼ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ 2016ರಲ್ಲಿ ಸುಮಾರು 7.8 ಬಿಲಿಯನ್‌ ಡಾಲರ್‌ ಅಂದ್ರೆ, ಈಗಿನ ರೇಟ್‌ನಲ್ಲಿ ಸುಮಾರು 64 ಸಾವಿರ ಕೋಟಿ ವೆಚ್ಚದಲ್ಲಿ 36 ರಫೆಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ನಡೆದಿತ್ತು. ಫ್ರಾನ್ಸ್‌ನ ದಸ್ಸೋ ಕಂಪನಿ ಜೊತೆ ಭಾರತ ಸರ್ಕಾರ ಈ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಫ್ರೆಂಚ್‌ ಕೋರ್ಟ್‌ನಲ್ಲಿ ಈ ಬಗ್ಗೆ ತನಿಖೆ ನಡಿತಾ ಇದೆ.

-masthmagaa.com

Contact Us for Advertisement

Leave a Reply