ಯುದ್ಧದ ಬದಲಿಗೆ ಬುದ್ಧನನ್ನು ಕೊಟ್ಟಿದ್ದೇವೆ: ವಿಶ್ವಸಂಸ್ಥೆಯಲ್ಲಿ ಮೋದಿ ಮಾತು

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಪಾಕ್ ಮತ್ತು ಭಯೋತ್ಪಾದನೆ ವಿರುದ್ಧ ಕೆಂಡಕಾರಿದ ಪ್ರಧಾನಿ ಮೋದಿ, ವಿಶ್ವಸಂಸ್ಥೆಗೆ ಹೊಸ ದಿಕ್ಕು ನೀಡುವ ಅಗತ್ಯವಿದೆ. ಭಯೋತ್ಪಾದನೆ ವಿರುದ್ಧ ಇಡೀ ವಿಶ್ವವೇ ಒಂದಾಗಬೇಕಿದೆ. ನಾವು ವಿಶ್ವಕ್ಕೆ ಯುದ್ಧ ನೀಡಿಲ್ಲ. ಬುದ್ಧನನ್ನು ನೀಡಿದ್ದೇವೆ. ಪ್ರತಿಯೊಂದು ಜೀವದಲ್ಲೂ ಶಿವನನ್ನು ಕಾಣೋದು ಭಾರತದ ಸಂಸ್ಕøತಿ. ಭಯೋತ್ಪಾದನೆ ವಿರುದ್ಧದ ನಮ್ಮ ಧ್ವನಿಯಲ್ಲಿ ಆಕ್ರೋಶವಿದೆ. ಭಯೋತ್ಪಾದನೆ ಮಾನವತೆಗೆ ವಿರುದ್ಧವಾಗಿದೆ ಅಂದ್ರು. ಭಾರತವನ್ನು 2025ರ ವೇಳೆಗೆ ಟಿಬಿ ಮುಕ್ತ ದೇಶವನ್ನಾಗಿ ಮಾಡುತ್ತೇವೆ. ಈಗ ಭಾರತದಲ್ಲಿ ಒಂದೇ ಬಾರಿ ಬಳಕೆಯಾಗುವಂತಹ ವಸ್ತುಗಳನ್ನು ನಿಷೇಧಿಸಲಾಗಿದೆ. ಅದಕ್ಕಾಗಿ ಒಂದು ಅಭಿಯಾನವೇ ನಡೆಯುತ್ತಿದೆ. ನಾನು ಸಿಂಗಲ್ ಯೂಸ್ ಆಫ್ ಪ್ಲಾಸ್ಟಿಕ್ ಎಂಬ ಬರಹವನ್ನು ವಿಶ್ವಸಂಸ್ಥೆಯ ಗೋಡೆಯಲ್ಲಿ ನೋಡಿದೆ ಅಂತ ಹೇಳಿದ್ರು.

Contact Us for Advertisement

Leave a Reply