ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಚೀನಾದಲ್ಲಿ ಅಭಿಷೇಕ, ರತ್ನಗಂಬಳಿ!

masthmagaa.com:

ಅಂಗೈಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೋಸ್ಕರ ಊರೆಲ್ಲಾ ತಿರುಗಾಡುದ್ರು ಅನ್ನೋ ಹಾಗೆ, ಮಾಲ್ಡೀವ್ಸ್‌ ಅಧ್ಯಕ್ಷ ಕಷ್ಟದಲ್ಲಿ ಸಹಾಯ ಮಾಡಿದ ಭಾರತ ಬಿಟ್ಟು, ಚೀನಾ ಜೊತೆ ಸಾಲು ಸಾಲು ಒಪ್ಪಂದ ಮಾಡ್ಕೊಂಡಿದ್ದಾರೆ.‌ ಚೀನಾ ಜೊತೆ ಸ್ಟ್ರಾಟೆಜಿಕ್‌ ಪಾರ್ಟ್ನರ್‌ಷಿಪ್‌ಗೆ ಕೈ ಹಾಕಿ, ಹೂಡಿಕೆಗೆ ದಾರಿ ಮಾಡ್ಕೊಟ್ಟು, ದಾರಿಲ್‌ ಹೋಗೋ ಮಾರಿನ ʻಬಾ ನಮ್‌ ಮನೆಗೇʼ ಅಂತ ಮುಯಿಝು ಕರೆದಿದ್ದಾರೆ. ಅಂದ್ಹಾಗೆ ಚೀನಾ ಪ್ರವಾಸದಲ್ಲಿರೋ ಅಧ್ಯಕ್ಷ ಮೊಹಮದ್‌ ಮುಯಿಝು ಬುಧವಾರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ರನ್ನ ಭೇಟಿ ಮಾಡಿದ್ದಾರೆ. ಮಯಿಝು ದಂಪತಿಯನ್ನ ಜಿನ್‌ಪಿಂಗ್‌ ದಂಪತಿ 21 ಗನ್‌ ಸಲ್ಯೂಟ್‌ ನಂತರ ರೆಡ್‌ ಕಾರ್ಪೆಟ್‌ ಹಾಕಿ ಬರಮಾಡಿಕೊಂಡಿದ್ದಾರೆ. ಬೀಜಿಂಗ್‌ನ ಗ್ರೇಟ್‌ ಹಾಲ್‌ ಆಫ್‌ ಪೀಪಲ್ಸ್‌ಗೆ ಈಗ್‌ ಬಂದ್ರಾ.. ಬನ್ನಿ ಬನ್ನಿ.. ಅಂತ ವೆಲ್‌ಕಮ್‌ ಮಾಡ್ಕೊಂಡಿದ್ದಾರೆ. ಸೇಮ್‌ ಹರಕೆ ಕುರಿ ಸೀನ್.. ಈ ವೇಳೆ ಚೀನಾ ನಮಗೆ ಕ್ಲೋಸೆಸ್ಟ್‌ ಮಿತ್ರ ರಾಷ್ಟ್ರ. ನಮ್ಮ ಅಭಿವೃದ್ಧಿಗೆ ಅತ್ಯುತ್ತಮ ಪಾಲುದಾರ ಅಂತೆಲ್ಲಾ ಮುಯಿಝು ಹಾಡಿ ಹೊಗಳಿದ್ದಾರೆ. ಅಧ್ಯಕ್ಷ ಜಿನ್‌ಪಿಂಗ್‌ ಸಹ, ಮುಯಿಝು ನಮಗೆ ಹಳೇ ಸ್ನೇಹಿತ… ಮಾಲ್ಡೀವ್ಸ್‌ ಜೊತೆ ದ್ವಿಪಕ್ಷೀಯ ಸಂಬಂಧವನ್ನ ಜಾಸ್ತಿ ಮಾಡಿ, ನೆಕ್ಸ್ಟ್‌ ಲೆವೆಲ್‌ಗೆ ತಗೊಂಡೋಗೊಕೆ ಎದುರು ನೋಡ್ತೀದೀವಿ ಅಂದಿದ್ದಾರೆ. ಅಲ್ಲದೆ ಈ ಮೀಟಿಂಗ್‌ನಲ್ಲಿ 21ಕ್ಕೂ ಹೆಚ್ಚು ಅಗ್ರೀಮೆಂಟ್‌ಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ. ಮಾಲ್ಡೀವ್ಸ್‌ನ ಸುಮಾರು 11 ಪ್ರಾಜೆಕ್ಸ್‌ಗಳಿಗೆ ಚೀನಾ ಹೂಡಿಕೆ ಮಾಡೋಕೆ ಸೈ ಎಂದಿದೆ. ಅಲ್ಲ ಈ ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಪಕ್ಕದಲ್ಲಿರೋ ಶ್ರೀಲಂಕಾ ಪರಿಸ್ಥಿತಿ ನೋಡಾದ್ರೂ ಬುದ್ಧಿ ಬರಬಾರ್ದ.. ಚೀನಾದ ಟೂರಿಸ್ಟ್‌ಗಳನ್ನ ಕರೆದಿದ್ದೂ ಸರಿ. BRI ಪ್ರಾಜೆಕ್ಟನ್ನ ಹಾಡಿ ಹೊಗಳಿದ್ದೂ ಸರಿ.. ಆದ್ರೆ ಗೊತ್ತಿದ್ದೂ ಗೊತ್ತಿದ್ದೂ ಚೀನಾ ಹೂಡಿಕೆ ದಾರಿ ಮಾಡಿ ಬೆಂಕಿಗೆ ಕೈ ಹಾಕೋ ಬಂಢತನಕ್ಕೆ ಏನು ಹೇಳೋದು.? ಅಲ್ಲದೆ ಚೀನಾ ತನ್ನ ಟೂರಿಸ್ಟ್‌ಗಳನ್ನ ಮಾಲ್ಡೀವ್ಸ್‌ಗೆ ಕಳಿಸೋ ಪ್ರಯತ್ನವನ್ನ ʻಇಂಟೆನ್ಸಿಫೈʼ ಮಾಡ್ಬೇಕಂತೆ. ಇನ್ನು, ಮತ್ತೊಮ್ಮೆ ಚೀನಾ ಜೊತೆ ಫ್ರೀ ಟ್ರೇಡ್‌ ಅಗ್ರೀಮೆಂಟ್‌ ಬಗ್ಗೇನೂ ಮುಯಿಝು ಚರ್ಚೆ ನಡೆಸಿದ್ದಾರೆ.

ಇನ್ನೂ 2022ರ ವಿಶ್ವ ಯೋಗ ದಿನ ಆಚರಣೆ ವಿರುದ್ಧ ಮಾಲ್ಡೀವ್ಸ್‌ನಲ್ಲಿ ದ್ವೇಷ ಹಾಗೂ ಹಿಂಸಾಚಾರ ವ್ಯಕ್ತವಾಗಿತ್ತು. ಅಂದ್ಹಾಗೆ 44 ಮುಸ್ಲಿಂ ರಾಷ್ಟ್ರ ಸೇರಿ 192 ದೇಶಗಳಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದ್ರೆ ಎಲ್ಲೂ ಕೂಡ ಇಂತ ಘಟನೆ ನಡೆದಿಲ್ಲ. ಬಟ್‌ ಮಾಲ್ಡೀವ್ಸ್‌ನಲ್ಲಿ ಮಾತ್ರ ಯೋಗ ಇಸ್ಲಾಂ ತತ್ವಗಳಿಗೆ ವಿರುದ್ಧ ಆಗಿದೆ ಅಂತ, 150 ಕ್ಕೂ ಹೆಚ್ಚು ಪ್ರತಿಭಟನಾಕಾರರು ನೂರಾರು ಜನ ಯೋಗ ಮಾಡ್ತಿದ್ದ ಫುಟ್ಬಾಲ್‌ ಸ್ಟೇಡಿಯಂಗೆ ಮುತ್ತಿಗೆ ಹಾಕಿದ್ರು. ಈತರದ ಭಾರತ ವಿರೋಧಿ ಕೃತ್ಯಗಳು ಒಂದೆರ್ಡಲ್ಲ. ಈಗ ಯೋಗ ಡೇ ಘಟನೆಗೂ ಮುಯಿಝು ಕೆಳಗಿರೋ ಭಾರತ ವಿರೋಧಿ ವಿಭಾಗದ ಶಕ್ತಿಗಳೇ ಕಾರಣ ಅಂತ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply