ಇಂಡೋನೇಷ್ಯಾಗೆ ಬಂತು 81 ರೋಹಿಂಗ್ಯ ಮುಸ್ಲಿಮರಿದ್ದ ದೋಣಿ!

masthmagaa.com:

ಇಂಡೋನೇಷ್ಯಾದ ಅಸೆಹ್​ ಪ್ರಾಂತ್ಯಕ್ಕೆ ರೋಹಿಂಗ್ಯ ವಲಸಿಗರ ದೋಣಿಯೊಂದು ಹೋಗಿದೆ. ಇದ್ರಲ್ಲಿ ಸುಮಾರು 81 ಮಂದಿ ಇದ್ದು, ಬಾಂಗ್ಲಾದೇಶದ ನಿರಾಶ್ರಿತರ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿದ್ದಾರೆ ಅಂತ ಸ್ಥಳೀಯ ಅಧಿಕಾರಿಗಳು ತಿಳಿಸಿದ್ಧಾರೆ. ಬೌದ್ಧದೇಶವಾದ ಮಯನ್ಮಾರ್​ನಲ್ಲಿ ರೋಹಿಂಗ್ಯ ಮುಸ್ಲಿಮರ ವಿರುದ್ಧ ಹಿಂಸಾಚಾರ ಶುರುವಾದ ಬಳಿಕ ಅಂದ್ರೆ 2017ರಿಂದೆ ಈವರೆಗೆ ಸುಮಾರು 7 ಲಕ್ಷ ಮಂದಿ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಹೋಗಿದ್ದಾರೆ. ಆದ್ರೆ ಅಲ್ಲೂ ಕೂಡ ಅವರಿಗೆ ನೆಲೆ ಸಿಗದ ಹಿನ್ನೆಲೆಯಲ್ಲಿ ಬೇರೆ ದೇಶಗಳತ್ತ ಮುಖ ಮಾಡ್ತಿದ್ದಾರೆ. ಅದೇ ರೀತಿ 90 ಜನರ ಈ ಗುಂಪು ಕೂಡ ಬಾಂಗ್ಲಾದೇಶದ ನಿರಾಶ್ರಿತರ ಕೇಂದ್ರದಿಂದ ದೋಣಿಯೊಂದರಲ್ಲಿ ತಪ್ಪಿಸಿಕೊಂಡು ಹೊರಟಿತ್ತು. ಫೆಬ್ರವರಿ 11ರಂದು ಹೊರಟಿದ್ದ ಈ ತಂಡ ದೀರ್ಘಕಾಲ ಪ್ರಯಾಣ ಮಾಡಿ ಈಗ ಇಂಡೋನೇಷ್ಯಾಗೆ ಬಂದಿದೆ. ಮಾರ್ಗ ಮಧ್ಯದಲ್ಲೇ 9 ಮಂದಿ ಜೀವ ಬಿಟ್ಟಿದ್ದು, ಇನ್ನು 81 ಮಂದಿ ಉಳಿದಿದ್ದಾರೆ. ಈ ನಡುವೆ ಆಸಿಯಾನ್ ಅಂದ್ರೆ ಅಸೋಸಿಯೇಷನ್ ಆಫ್ ಸೌತ್ ಈಸ್ಟ್​ ಏಷ್ಯನ್ ನೇಷನ್ಸ್​​ ಮಯನ್ಮಾರ್ ಮಿಲಿಟರಿ ಅಧ್ಯಕ್ಷ ಮಿನ್ ಆಂಗ್ ಲೇಯಿಂಗ್ ಭೇಟಿಯಾಗಿದ್ದಾರೆ. 6 ವಾರಗಳ ಹಿಂದೆ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮಯನ್ಮಾರ್ ಮಿಲಿಟರಿ ಆಡಳಿತ ದೇಶದಲ್ಲಿರೋ ಸಂಘರ್ಷದ ಸ್ಥಿತಿಯನ್ನು ಬಗೆಹರಿಸೋದಾಗಿ ಭರವಸೆ ನೀಡಿತ್ತು. ಆದ್ರೂ ಕೂಡ ಈ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ.

-masthmagaa.com

Contact Us for Advertisement

Leave a Reply