ದ್ವೀಪಗಳ ದೇಶ ಇಂಡೋನೇಷ್ಯಾದಲ್ಲಿ ಚಂಡಮಾರುತದ ಅಬ್ಬರ

masthmagaa.com:

ಸೆರೋಜಾ ಚಂಡಮಾರುತದ ಅಬ್ಬರಕ್ಕೆ ಇಂಡೋನೇಷ್ಯಾ ತತ್ತರಿಸಿ ಹೋಗಿದೆ. ಭಾರಿ ಗಾಳಿ, ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಇದುವರೆಗೆ ಕನಿಷ್ಠ 70 ಜನ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಅಂತ ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ. ಆದ್ರೆ ಸ್ಥಳೀಯ ಅಧಿಕಾರಿಗಳ ಪ್ರಕಾರ ಸಾವಿನ ಸಂಖ್ಯೆ 100 ದಾಟಿದೆ ಅಂತೆ. ತಗ್ಗುಪ್ರದೇಶದಲ್ಲಿ ವಾಸಿಸುತ್ತಿದ್ದ ಸಾವಿರಾರು ಜನರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಸೇತುವೆಗಳು ಮುಳುಗಡೆಯಾಗಿದ್ದು, ಮರಗಳು ರಸ್ತೆ ಮೇಲೆ ಉರುಳಿವೆ.

ಚಂಡಮಾರುತದಿಂದ ಸಮುದ್ರದಲ್ಲಿ ಎತ್ತರದ ಅಲೆಗಳು ಏಳುತ್ತಿದ್ದು ಕನಿಷ್ಠ ಒಂದು ಹಡಗು ಮುಳುಗಿದೆ. ಇದರಿಂದ ಅವಶೇಷಗಳ ಅಡಿ ಸಿಲುಕಿರೋರನ್ನ ರಕ್ಷಿಸೋ ಕಾರ್ಯಕ್ಕೆ ತುಂಬಾ ಸಮಸ್ಯೆ ಆಗಿದೆ. ಇಂಡೋನೇಷ್ಯಾ ಹೇಳಿಕೇಳಿ ದ್ವೀಪಗಳ ದೇಶ. ಜಾವಾ, ಸುಮಾತ್ರಾ ಸೇರಿದಂತೆ 17 ಸಾವಿರಕ್ಕೂ ಹೆಚ್ಚು ದ್ವೀಪಗಳು ಇಲ್ಲಿವೆ. ಜನಸಂಖ್ಯೆಯಲ್ಲಿ ಚೀನಾ, ಭಾರತ, ಅಮೆರಿಕ ನಂತ್ರ ಇದೆ ಇಂಡೋನೇಷ್ಯಾ..
ಇಂಡೋನೇಷ್ಯಾದ ನೆರೆಯ ಪುಟ್ಟ ದೇಶವಾದ ಈಸ್ಟ್​ ಟಿಮೋರ್​ನಲ್ಲೂ ಚಂಡಮಾರುತದ ಎಫೆಕ್ಟ್​ಗೆ ಕನಿಷ್ಠ 27 ಜನ ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply