ತಿಹಾರ್ ಜೈಲಿನಲ್ಲಿ ಅವರಿಬ್ಬರು ಮಾಡ್ತಿದ್ದಿದ್ದು ಏನು ಗೊತ್ತಾ?

masthmagaa.com:

ದೆಹಲಿಯ ತಿಹಾರ್​ ಜೈಲಿನಲ್ಲಿದ್ದ ಯುನಿಟೆಕ್​ ಮಾಜಿ ಪ್ರಮೋಟರ್ಸ್​​​ ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರರನ್ನ ತಕ್ಷಣ ಮುಂಬೈನ ಅರ್ಥರ್ ರೋಡ್​ ಜೈಲು ಮತ್ತು ತಲೋಜಾ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಕಾರಣ ಏನ್​ ಗೊತ್ತಾ ಇವರಿಬ್ರು ತಿಹಾರ್ ಜೈಲಿನಿಂದಲೇ ಆಪರೇಟ್​ ಮಾಡ್ತಿದ್ರು ಅನ್ನೋದು. ಜೈಲಿನಲ್ಲೇ ರಹಸ್ಯವಾಗಿ ಅಂಡರ್​ಗ್ರೌಂಡ್​ ಆಫೀಸ್​ ಇಟ್ಕೊಂಡಿದ್ರು ಅನ್ನೋದು. ಈ ಕಚೇರಿಯಲ್ಲಿ ಪ್ರಾಪರ್ಟಿ ಸೇಲ್​​ಗೆ ಸಂಬಂಧಿಸಿದ ಒರಿಜಿನಲ್ ಪೇಪರ್ಸ್, ಡಿಜಿಟಲ್ ಸಿಗ್ನೇಚರ್ಸ್ ಮತ್ತು ಕಂಪ್ಯೂಟರ್​​ಗಳು ಸಿಕ್ಕಿವೆ ಅಂತ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್​​ಗೆ ಹೇಳಿತ್ತು. ಜೈಲಿನಿಂದಲೇ ಆರೋಪಿಗಳು ಆಪರೇಟ್​ ಮಾಡ್ತಿದ್ದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರೋ ಕೋರ್ಟ್ ಇಬ್ಬರನ್ನ ಕೂಡ ದೆಹಲಿ ಜೈಲಿಂದ ಮುಂಬೈ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಅದು ಕೂಡ ಬೇರೆ ಬೇರೆ ಜೈಲಿಗೆ. ಈ ಜೈಲುಗಳಲ್ಲಿ ಇಬ್ಬರಿಗೂ ಯಾವುದೇ ಹೆಚ್ಚುವರಿ ಸೌಲಭ್ಯ ನೀಡ್ಬಾರ್ದು ಅಂತ ಕೂಡ ಸುಪ್ರೀಂಕೋರ್ಟ್ ಆದೇಶಿಸಿದೆ. ಜೊತೆಗೆ ಈ ಪ್ರಕರಣ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುವಂತೆ ಸೂಚಿಸಿದೆ. ನೋಡಿ ನಮ್ಮ ಜೈಲುಗಳು ಹೇಗಿವೆ ಅಂತ. ಜೈಲಿನ ಒಳಗೆ ಆರೋಪಿಗಳ ಅಂಡರ್​ಗ್ರೌಂಡ್​ ಸೀಕ್ರೆಟ್​ ಆಫೀಸ್ ಅಂತೆ.

-masthmagaa.com

Contact Us for Advertisement

Leave a Reply