ಪಾಕ್‌ಗೆ ಬಂದ ದುಸ್ಥಿತಿ: ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಟೋರ್‌

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರೋ ಪಾಕಿಸ್ತಾನಕ್ಕೆ ತನ್ನ ಜನರಿಗೆ ಗ್ಯಾಸ್‌ ಸಿಲಿಂಡರ್‌ಗಳನ್ನ ಕೂಡ ಒದಗಿಸೋಕೆ ಆಗ್ತಿಲ್ಲ. ಹೀಗಾಗಿ ಅಲ್ಲಿನ ಜನ್ರು ಎಲ್‌ಪಿಜಿ ಅಡುಗೆ ಗ್ಯಾಸ್‌ನ್ನ ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ತುಂಬಿಸಿಕೊಳ್ತಿದಾರೆ. ತನ್ನ ಜನ್ರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡೋಕಾಗದ ದುಸ್ಥಿತಿ ಪಾಕ್‌ಗೆ ಬಂದೊದಗಿದೆ. ಇನ್ನು ಗ್ಯಾಸ್‌ ಸಿಲಿಂಡರ್‌ ಸ್ಟಾಕ್‌ಗಳಲ್ಲಿ ಗಣನೀಯವಾಗಿ ಇಳಿಕೆ ಕಂಡಿಬಂದಿರೊ ಹಿನ್ನಲೆಯಲ್ಲಿ ಮಾರಾಟಗಾರರು ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನ ನಿಲ್ಲಿಸಿದ್ದಾರೆ. ಹೀಗಾಗಿ ಖೈಬರ್‌ ಪಖ್ತುಂಖ್ವಾ ಜನ್ರು ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ಗ್ಯಾಸ್‌ ಅನ್ನ ಸ್ಟೋರ್‌ ಮಾಡಿಕೊಳ್ತಿದಾರೆ. ಅಂದ್ಹಾಗೆ ಪಾಕ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ನ ಬೆಲೆ 10 ಸಾವಿರ ಪಾಕಿಸ್ತಾನ್‌ ರೂಪಾಯಿ ಅಂದ್ರೆ ಸುಮಾರು 3600 ರೂಪಾಯಿ ಇದೆ. ಹೀಗಾಗಿ ಅಲ್ಲಿನ ಜನ್ರಿಗೆ 500ರಿಂದ 900 ಪಾಕ್‌ ರೂಪಾಯಿ ಕೊಟ್ಟು ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ಗ್ಯಾಸ್‌ನ್ನ ಖರೀದಿ ಮಾಡೋಕೆ ಒತ್ತಾಯ ಮಾಡಲಾಗ್ತಿದೆ. ಇನ್ನು ಈ ರೀತಿ ಪ್ಲಾಸ್ಟಿಕ್‌ನಲ್ಲಿ ಗ್ಯಾಸ್‌ ತೆಗೆದುಕೊಂಡ್‌ ಹೋಗ್ತಿರೋದ್ರಿಂದ ಸ್ಪೋಟಗೊಳ್ಳೋ ಅಪಾಯ ಹೆಚ್ಚಿದೆ. ಇದು ಒಂದ್‌ ರೀತಿ ಚಲಿಸೋ ಸೊಫಟಕದ ರೀತಿ ಅಂದ್ರೆ ಅಷ್ಟು ಅಪಾಯಕಾರಿ ಅಂತ ಹೇಳಲಾಗಿದೆ. ಈಗಾಗಲೇ ಈ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆಯಿಂದ ಕನಿಷ್ಠ 8 ಜನ್ರು ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply